ಬ್ರೆಕ್ಸಿಟ್ ಗಡುವಿಗೆ ವಿಸ್ತರಣೆ ನೀಡಲು ಐರೋಪ್ಯ ಒಕ್ಕೂಟ ಸಿದ್ಧ

Update: 2019-10-21 16:49 GMT

ಲಂಡನ್, ಅ. 21: ಬ್ರೆಕ್ಸಿಟ್ ಒಪ್ಪಂದಕ್ಕೆ ಈ ವಾರ ಸಂಸತ್ತಿನ ಅಂಗೀಕಾರ ಪಡೆಯುವಲ್ಲಿ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ವಿಫಲರಾದರೆ, ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ನ ನಿರ್ಗಮನ (ಬ್ರೆಕ್ಸಿಟ್)ವನ್ನು 2020ರ ಫೆಬ್ರವರಿವರೆಗೆ ಮುಂದೂಡಲು ಐರೋಪ್ಯ ಒಕ್ಕೂಟ ನಿರ್ಧರಿಸಿದೆ ಎಂದು ‘ಸಂಡೇ ಟೈಮ್ಸ್’ ವರದಿ ಮಾಡಿದೆ.

 ಈ ಹೊಸ ಗಡುವಿಗೆ ಮುನ್ನವೂ ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರಬಹುದಾಗಿದೆ. ಅಂದರೆ ಈ ಅವಧಿಯಲ್ಲಿ ಒಪ್ಪಂದಕ್ಕೆ ಸಂಸತ್ತಿನ ಅಂಗೀಕಾರ ದೊರೆತರೆ, ನವೆಂಬರ್ 1, ಡಿಸೆಂಬರ್ 15 ಅಥವಾ ಜನವರಿ 15ರಂದು ಕೂಡ ಬ್ರಿಟನ್ ಐರೋಪ್ಯ ಒಕ್ಕೂಟಕ್ಕೆ ವಿದಾಯ ಹೇಳಬಹುದಾಗಿದೆ ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News