ಇಂಡೋನೇಶ್ಯ: 2ನೇ ಅವಧಿಗೆ ಅಧ್ಯಕ್ಷರಾಗಿ ವಿಡೋಡೊ ಪ್ರಮಾಣ

Update: 2019-10-21 16:57 GMT

ಜಕಾರ್ತ, ಅ. 21: ಇಂಡೋನೇಶ್ಯ ಅಧ್ಯಕ್ಷ ಜೋಕೊ ವಿಡೋಡೊ ರವಿವಾರ ಎರಡನೇ ಅವಧಿಗೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

58 ವರ್ಷದ ವಿಡೋಡೊ ಮತ್ತು ಉಪಾಧ್ಯಕ್ಷ 76 ವರ್ಷದ ಮಾರುಫ್ ಅಮಿನ್ ಇನ್ನೊಂದು ಐದು ವರ್ಷದ ಅವಧಿಗಾಗಿ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ವಿದೇಶಿ ಸರಕಾರಗಳ ಮುಖ್ಯಸ್ಥರು, ಸಂಸದರು ಮತ್ತು ಪ್ರತಿಪಕ್ಷಗಳ ನಾಯಕರು ಉಪಸ್ಥಿತರಿದ್ದರು.

ಭಯೋತ್ಪಾದಕ ದಾಳಿ ನಡೆಯುವ ಬೆದರಿಕೆಯ ಹಿನ್ನೆಲೆಯಲ್ಲಿ ಸಂಸತ್ತಿನ ಹೊರಗೆ 30,000ಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಜಕಾರ್ತದ ರಾಷ್ಟ್ರೀಯ ಸ್ಮಾರಕದ ಸಮೀಪ ಬೃಹತ್ ಪರದೆಯಲ್ಲಿ ಹಲವು ಸಾವಿರ ಬೆಂಬಲಿಗರು ಪ್ರಮಾಣವಚನ ಕಾರ್ಯಕ್ರಮವನ್ನು ವೀಕ್ಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News