×
Ad

2020ರ ವೇಳೆಗೆ ಬಡತನ ನಿರ್ಮೂಲನ: ಚೀನಾ

Update: 2019-10-21 22:34 IST

ಬೀಜಿಂಗ್, ಅ. 21: ಚೀನಾವು 2020ರ ವೇಳೆಗೆ ಕಡುಬಡತನವನ್ನು ನಿರ್ಮೂಲಗೊಳಿಸಲಿದೆ ಎಂದು ಆ ದೇಶದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಈ ಉದ್ದೇಶಕ್ಕಾಗಿ ವಿಶ್ವಸಂಸ್ಥೆ ನಿಗದಿಪಡಿಸಿದ ಗಡುವಿಗೆ 10 ವರ್ಷಗಳು ಇರುವಂತೆಯೇ ಚೀನಾ ಈ ಗುರಿಯನ್ನು ಸಾಧಿಸಲಿದೆ ಎಂದು ಅವರು ತಿಳಿಸಿದ್ದಾರೆ.

17 ಸಹ್ಯ ಅಭಿವೃದ್ಧಿ ಗುರಿಗಳನ್ನು ಒಳಗೊಂಡ ಸಹ್ಯ ಅಭಿವೃದ್ಧಿಯನ್ನು ಸಾಧಿಸಲು ವಿಶ್ವಸಂಸ್ಥೆಯು ‘2030ರ ಕಾರ್ಯಸೂಚಿ’ಯನ್ನು ನಿಗದಿಪಡಿಸಿದೆ.

‘‘ಚೀನಾದ ಬಡ ಕೌಂಟಿಗಳ ಪೈಕಿ 90 ಶೇಕಡದಷ್ಟು ಈ ವರ್ಷದ ಕೊನೆಯೊಳಗೇ ಬಡತನದ ಪಟ್ಟಿಯಿಂದ ಹೊರಬೀಳಲಿವೆ’’ ಎಂದು ಬಡತನ ನಿರ್ಮೂಲನೆ ಮತ್ತು ಅಭಿವೃದ್ಧಿ ಇಲಾಖೆಯ ನಿರ್ದೇಶಕ ಲಿಯು ಯೊಂಗ್‌ಪೂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News