ತನ್ನ ರಿಸಾರ್ಟ್‌ನಲ್ಲಿ ಜಿ-7 ಸಮ್ಮೇಳನ ನಿರ್ಧಾರ ಕೈಬಿಟ್ಟ ಟ್ರಂಪ್

Update: 2019-10-21 17:32 GMT

ವಾಶಿಂಗ್ಟನ್, ಅ. 21: 2020ರ ಜಿ-7 ಶೃಂಗ ಸಮ್ಮೇಳನವನ್ನು ತನ್ನ ಮಯಾಮಿ ರಿಸಾರ್ಟ್‌ನಲ್ಲಿ ನಡೆಸುವ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಬಿಟ್ಟಿದ್ದಾರೆ.

ತನ್ನ ಕಂಪೆನಿಯ ಲಾಭಕ್ಕಾಗಿ ತನ್ನ ಅಧ್ಯಕ್ಷೀಯ ಹುದ್ದೆಯನ್ನು ಬಳಸಿಕೊಳ್ಳಲು ಟ್ರಂಪ್ ನಡೆಸುತ್ತಿದ್ದಾರೆನ್ನಲಾದ ಪ್ರಯತ್ನದ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ತಾನು ಹಾಗೆ ಭಾವಿಸಿಲ್ಲ ಎಂದು ಶನಿವಾರ ಸರಣಿ ಟ್ವೀಟ್‌ಗಳನ್ನು ಮಾಡಿರುವ ಟ್ರಂಪ್ ಹೇಳಿದ್ದಾರೆ. ‘‘ಇದರಿಂದ ನಮ್ಮ ದೇಶಕ್ಕೆ ಏನಾದರೂ ಒಳ್ಳೆಯದಾಗುತ್ತದೆ ಎಂಬ ಉದ್ದೇಶದಿಂದ ನಾನು ಈ ಯೋಜನೆ ರೂಪಿಸಿದ್ದೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News