ಎನ್ ಆರ್ ಸಿ: ರಾಜ್ಯ ಸರಕಾರದ ತೀರ್ಮಾನ ಸ್ವಾಗತಾರ್ಹ; ಯುನಿವೆಫ್ ಕರ್ನಾಟಕ

Update: 2019-10-21 18:00 GMT

ಮಂಗಳೂರು: ಇತ್ತೀಚಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಕಾರ್ಯಕ್ರಮವೊಂದರಲ್ಲಿ ಅಸ್ಸಾಂನ ರೀತಿಯಲ್ಲಿ ದೇಶಾದ್ಯಂತ ಎನ್ ಆರ್ ಸಿ ಯನ್ಜು ಜಾರಿಗೆ ತರಲಾಗುವುದು ಎಂಬ ಘೋಷಣೆಯ ಹಿನ್ನಲೆಯಲ್ಲಿ  ರಾಜ್ಯ ಗೃಹಸಚಿವ ಬಸವರಾಜ್ ಬೊಮ್ಮಾಯಿಯವರು ಹೇಳಿಕೆಯೊಂದನ್ನು ನೀಡಿ ಕರ್ನಾಟಕದಲ್ಲೂ ಎನ್ ಆರ್ ಸಿ (ಪೌರತ್ವ ತಿದ್ದುಪಡಿ ಕಾಯ್ದೆ) ಯನ್ನು ಜಾರಿಗೆ ತರಲಾಗುವುದು ಎಂದು ಇತ್ತೀಚೆಗೆ ಹೇಳಿದ್ದರು. ಈ ಕುರಿತು ರಾಜ್ಯಾದ್ಯಂತ ಗೊಂದಲ ಹಾಗು ಗದ್ದಲವೇರ್ಪಟ್ಟಿತ್ತು. ಅನೇಕ ಸಂಘಸಂಸ್ಥೆಗಳು ಇದರ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಯುನಿವೆಫ್ ಕರ್ನಾಟಕವು ಅದನ್ನು ತೀವ್ರವಾಗಿ ವಿರೋಧಿಸಿತ್ತು ಹಾಗು ಜನತೆಯಲ್ಲಿ ಆ ಕುರಿತು ಜಾಗೃತಿಯನ್ನು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದರೆ ಈಗ ರಾಜ್ಯ ಸರಕಾರ ತನ್ನ ಹೇಳಿಕೆಯನ್ನು ಹಿಂಪಡೆದಿದ್ದು ಡಾಟಾ ಬೇಸ್ ಕಾರ್ಯಕ್ರಮದಡಿ ವಿದೇಶಿಗರನ್ನು ಕಂಡುಹಿಡಿಯುವ ಪ್ರಯತ್ನವನ್ನುಮಾಡಲಾಗುವುದು ಎಂಬ ಗೃಹಸಚಿವರ ಹೇಳಿಕೆಯನ್ನು ಯುನಿವೆಫ್ ಕರ್ನಾಟಕ ಸ್ವಾಗತಿಸುತ್ತದೆ ಎಂದು ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಲವೊಂದು ಸಮಸ್ಯೆಗಳು ನಮ್ಮ ರಾಜ್ಯ ಅನುಭವಿಸುತ್ತಿರುವ ಈ ಹಂತದಲ್ಲಿ ರಾಜ್ಯ ನವನಿರ್ಮಾಣದಲ್ಲಿ ರಾಜಕೀಯ ಮಾಡದೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕೆಂದು ಅವರು ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News