ಜಮ್ಮುಕಾಶ್ಮೀರ: ಉಗ್ರರ ಗುಂಡಿಗೆ ಸೇನಾಧಿಕಾರಿ ಸಾವು

Update: 2019-10-22 17:11 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಅ. 22: ನೌಶೇರಾ ವಲಯದ ಠಾಣೆ (ಗಡಿ ನಿಯಂತ್ರಣ ರೇಖೆಯ 500 ಮೀಟರ್ ಒಳಗಡೆ) ಮೇಲೆ ಮಂಗಳವಾರ ಬೆಳಗ್ಗೆ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡ ಭಾರತೀಯ ಸೇನೆಯ ಜೂನಿಯರ್ ಕಮಿಷನ್ಡ್ ಅಧಿಕಾರಿ ಮೃತಪಟ್ಟಿದ್ದಾರೆ. ಕೂಡಲೇ ಭದ್ರತಾ ಪಡೆ ಭಯೋತ್ಪಾದಕರು ಅವಿತಿದ್ದ ಸ್ಥಳವನ್ನು ಸುತ್ತುವರಿಯಿತು.

ಭಯೋತ್ಪಾದಕರು ಒಳ ನುಸುಳುವಿಕೆಗೆ ಬೆಂಬಲ ನೀಡಲು ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿರುವುದಕ್ಕೆ ಪ್ರತೀಕಾರವಾಗಿ ಭದ್ರತಾ ಪಡೆ ರವಿವಾರ ಗಡಿ ನಿಯಂತ್ರಣ ರೇಖೆಯಲ್ಲಿರುವ ಪಾಕಿಸ್ತಾನದ ಸೇನಾ ನೆಲೆ ಹಾಗೂ ಮೂರು ಭಯೋತ್ಪಾದಕ ಶಿಬಿರಗಳನ್ನು ಪಿರಂಗಿ ಬಳಸಿ ಧ್ವಂಸಗೊಳಿಸಿತ್ತು. ಅನಂತರ ಕಾಶ್ಮೀರದಲ್ಲಿ ನಡೆಯುತ್ತಿರುವ ಮೊದಲ ಎನ್‌ಕೌಂಟರ್ ಇದಾಗಿದೆ. ಭಾರತೀಯ ಸೇನಾ ಪಡೆಯ ಫಿರಂಗಿ ದಾಳಿಯಿಂದ ಪಾಕಿಸ್ತಾನ ಸೇನೆಯ ಕನಿಷ್ಠ 6 ಮಂದಿ ಯೋಧರು ಮೃತಪಟ್ಟಿದ್ದಾರೆ ಎಂದು ಸೇನಾ ವರಿಷ್ಠ ಬಿಪಿನ್ ರಾವತ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News