ಕೆನಡಾ ಸಂಸತ್ತಿಗೆ 18 ಪಂಜಾಬಿಗಳು

Update: 2019-10-22 18:13 GMT
ಜಗಮೀತ್ ಸಿಂಗ್

ಒಟ್ಟಾವಾ: ಕೆನಡಾದಲ್ಲಿ ನಡೆದ ಮಹಾ ಚುನಾವಣೆಯಲ್ಲಿ ಅಲ್ಲಿನ ವಿವಿಧ ಪಕ್ಷಗಳಿಂದ 18 ಮಂದಿ ಪಂಜಾಬಿಗಳು ಸಂಸತ್ತಿಗೆ ಆಯ್ಕೆಯಾಗಿದ್ದಾರೆ. 

ಒಟ್ಟು 47 ಮಂದಿ ಭಾರತೀಯ ಮೂಲದವರು ಸ್ಪರ್ಧಿಸಿದ್ದು, ಆ ಪೈಕಿ ವಿಜೇತ 18 ಸಂಸದರೂ ಪಂಜಾಬಿಗಳು.

ಭಾರತೀಯ ಮೂಲದ ಜಗಮೀತ್ ಸಿಂಗ್ ಅವರ ಪಕ್ಷ ನ್ಯೂ ಡೆಮಾಕ್ರಟಿಕ್ ಪಾರ್ಟಿ 24 ಸ್ಥಾನಗಳನ್ನು ಗೆದ್ದಿದ್ದು ಸರಳ ಗೆಲುವು ಪಡೆದು ಇತರ ಪಕ್ಷಗಳ ನೆರವಿನ ನಿರೀಕ್ಷೆಯಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಹೊಸ ಸರಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.

ಲಿಬರಲ್ ಪಾರ್ಟಿಯಿಂದ ಹರ್ಜಿತ್ ಸಜ್ಜನ್ , ರಣದೀಪ್ ಸಿಂಗ್ ಸರಾಯ್ , ಸುಖ್ ಧಲಿವಾಲ್ , ನವದೀಪ್ ಸಿಂಗ್ ಬೈನ್ಸ್ , ಗಗನ್ ಸಿಖಂದ್ , ರಾಮೇಶ್ವರ್ ಸಿಂಗ್ ಸಂಗಾ , ಮಣಿಂದರ್ ಸಿಂಗ್ ಸಿಧು , ಕಮಲ್ ಖೇರಾ , ರೂಬಿ ಸಹೋಟ, ಸೋನಿಯಾ ಸಿಧು, ಬರ್ದಿಷ್ ಚಾಗರ್ , ರಾಜ್ ಸೈನಿ ಗೆದ್ದಿದ್ದಾರೆ.

ನ್ಯೂ ಡೆಮಾಕ್ರಟಿಕ್ ಪಾರ್ಟಿಯಿಂದ ಜಗಮೀತ್ ಸಿಂಗ್, ಕನ್ಸರ್ವೇಟಿವ್ ಪಾರ್ಟಿಯಿಂದ ಟಿಮ್ ಸಿಂಗ್ ಉಪ್ಪಲ್, ಜಸರಾಜ್ ಸಿಂಗ್ ಹಲ್ಲನ್ , ಜಗ್ ಸಹೋಟ ಹಾಗು ಬಾಬ್ ಸರೋಯಾ ಗೆದ್ದಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News