ಅ.25: ಸಿಂಡ್ ಬ್ಯಾಂಕ್‌ನಿಂದ ಉಚಿತ ರಕ್ತದಾನ ಶಿಬಿರ
Update: 2019-10-23 19:33 IST
ಉಡುಪಿ, ಅ.23: ರಾಷ್ಟ್ರೀಕೃತ ಸಿಂಡಿಕೇಟ್ ಬ್ಯಾಂಕಿನ 94ನೇ ಸಂಸ್ಥಾಪನಾ ದಿನದ ಅಂಗವಾಗಿ ಬ್ಯಾಂಕಿನ ವಲಯ ಕಚೇರಿ ಉಚಿತ ರಕ್ತದಾನ ಶಿಬಿರ ವೊಂದನ್ನು ಅ.25ರ ಶುಕ್ರವಾರ ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜ್ಯುಬಿಲಿ ಹಾಲ್‌ನಲ್ಲಿ ಆಯೋಜಿಸಿದೆ.
ಶಿಬಿರ ಬೆಳಗ್ಗೆ 10:30ಕ್ಕೆ ಪ್ರಾರಂಭಗೊಳ್ಳಲಿದ್ದು, ಸಾರ್ವಜನಿಕರು ಸಾಮಾಜಿಕ ಸದ್ದುದ್ದೇಶಕ್ಕಾಗಿ ಅಧಿಕ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡುವಂತೆ ಸಿಂಡಿಕೇಟ್ ಬ್ಯಾಂಕಿನ ಜನರಲ್ ಮ್ಯಾನೇಜರ್ ಭಾಸ್ಕರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.