ರಾಜ್ಯಪಾಲರ ಸ್ಥಾನ ದುರ್ಬಲ, ಮುಕ್ತ ಮನಸ್ಸಿನಿಂದ ಮಾತನಾಡಲು ಅಸಾಧ್ಯ: ಸತ್ಯಪಾಲ್ ಮಲಿಕ್

Update: 2019-10-23 14:30 GMT

ಕಟರಾ, ಅ. 23: ರಾಜ್ಯಪಾಲರ ಸ್ಥಾನ ದುರ್ಬಲ ಹಾಗೂ ಅವರಿಗೆ ಪತ್ರಿಕಾ ಗೋಷ್ಠಿ ನಡೆಸುವ ಅಥವಾ ಮುಕ್ತ ಮನಸ್ಸಿನಿಂದ ಮಾತನಾಡುವ ಅಧಿಕಾರ ಇಲ್ಲ ಎಂದು ಜಮ್ಮು ಹಾಗೂ ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಬುಧವಾರ ಹೇಳಿದ್ದಾರೆ. ಇಲ್ಲಿನ ಮಾತ ವೈಷ್ಣೋ ದೇವಿ ವಿಶ್ವವಿದ್ಯಾನಿಲಯದಲ್ಲಿ ಅವರು ಮಂಗಳವಾರ ಮಾತನಾಡಿದರು.

ಕೇಂದ್ರ ಸರಕಾರ ಹಾಗೂ ಜಮ್ಮು ಕಾಶ್ಮೀರ ಆಡಳಿತಕ್ಕೆ ಸತ್ಯ ತಿಳಿಸದ ಬೇಹುಗಾರಿಕೆ ಸಂಸ್ಥೆಯನ್ನು ಅವರು ತರಾಟೆಗೆ ತೆಗೆದುಕೊಂಡರು. ಇಲ್ಲಿಗೆ ಬಂದ ಬಳಿಕ, ನಾನು ಬೇಹುಗಾರಿಕೆ ಘಟಕದ ಮಾಹಿತಿಯನ್ನು ಸ್ವೀಕರಿಸಲಿಲ್ಲ. ಅವರು ನಮಗೆ ಅಥವಾ ದಿಲ್ಲಿಗೆ ಸತ್ಯ ತಿಳಿಸಿಲ್ಲ. ನಾನು 150ರಿಂದ 200 ವಿದ್ಯಾರ್ಥಿಗಳೊಂದಿಗೆ ಮಾತನಾಡಿದೆ. ಕನಸುಗಳು ಭಗ್ನಗೊಂಡ, ತಪ್ಪು ಹಾದಿಗೆ ಎಳೆಯಲ್ಪಟ್ಟ ಹಾಗೂ ಪ್ರಚೋದಿತ 13ರಿಂದ 30 ವರ್ಷಗಳ ನಡುವಿನ ಜನರು ಎಲ್ಲ ಸಮಸ್ಯೆಗೆ ಕಾರಣ ಎಂದು ಅವರು ಹೇಳುತ್ತಾರೆ ಎಂದು ಮಲಿಕ್ ತಿಳಿಸಿದ್ದಾರೆ.

ಜಮ್ಮು ಹಾಗೂ ಕಾಶ್ಮೀರದ ಮುಖ್ಯವಾಹಿನಿಯ ನಾಯಕರು ಕಣಿವೆಯ ಯುವಕರನ್ನು ಭಯೋತ್ಪಾದನೆಯ ದಾರಿಗೆ ತಳ್ಳುತ್ತಿದ್ದಾರೆ. ಆದರೆ, ತಮ್ಮ ಮಕ್ಕಳನ್ನು ಈ ಪಿಡುಗಿನಿಂದ ದೂರ ಇರಿಸುತ್ತಿದ್ದಾರೆ ಎಂದು ಮಲಿಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News