ಕಮಲೇಶ್ ತಿವಾರಿಗೆ 15 ಬಾರಿ ಇರಿಯಲಾಗಿದೆ: ಮರಣೋತ್ತರ ಪರೀಕ್ಷೆ ವರದಿ

Update: 2019-10-23 14:31 GMT

ಲಕ್ನೋ, ಅ. 23: ಕಮಲೇಶ್ ತಿವಾರಿ ಅವರ ಮರಣೋತ್ತರ ಪರೀಕ್ಷೆಯ ವರದಿ ಭಯಾನಕ ವಿವರಗಳನ್ನು ಬಹಿರಂಗಪಡಿಸಿದೆ. ಕಮಲೇಶ್ ತಿವಾರಿ ಅವರಿಗೆ 15 ಬಾರಿ ಇರಿಯಲಾಗಿತ್ತು ಎಂದು ತಿವಾರಿ ಅವರ ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ. ತಿವಾರಿ ಮೇಲಿನ ಎಲ್ಲ ಇರಿತಗಳು ದವಡೆ ಹಾಗೂ ಎದೆಯ ನಡುವಿನ ಭಾಗದಲ್ಲಿ ಕೇಂದ್ರೀಕೃತವಾಗಿತ್ತು. ಕತ್ತು ಕತ್ತರಿಸಿರುವುದರಿಂದ ಕುತ್ತಿಗೆಯಲ್ಲಿ ಎರಡು ಆಳ ಗಾಯಗಳಾಗಿವೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ.

ದಾಳಿಯಲ್ಲಿ ಸಾವನ್ನಪ್ಪಿರುವುದನ್ನು ದೃಢಪಡಿಸಲು ದುಷ್ಕರ್ಮಿಗಳು ಒಂದು ಮುಖಕ್ಕೆ ಗುಂಡು ಹಾರಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಪಾಯಿಂಟ್ 32 ಬುಲೆಟ್ ಅನ್ನು ತಿವಾರಿ ಅವರ ಬುರುಡೆಯ ಹಿಂದಿನ ಭಾಗದಲ್ಲಿ ಪತ್ತೆ ಮಾಡಿದ್ದಾರೆ.

ಕಮಲೇಶ್ ತಿವಾರಿ ಅವರನ್ನು ಲಕ್ನೋದ ನಾಕಾ ಹಿಂಡೋಲದಲ್ಲಿರುವ ಅವರ ನಿವಾಸದಲ್ಲಿ ಹತ್ಯೆಗೈಯಲಾಗಿತ್ತು. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರನ್ನು ಗುಜರಾತ್ ಎಟಿಎಸ್ ಬಂಧಿಸಿದೆ. ಬಂಧಿತರನ್ನು ಅಶ್ಫಾಕ್ ಶೇಕ್ (34) ಹಾಗೂ ಮೊಯ್ದಿನ್ ಪಠಾಣ್ (27) ಎಂದು ಗುರುತಿಸಲಾಗಿದೆ. ಇಬ್ಬರೂ ಗುಜರಾತ್‌ನ ಸೂರತ್ ನಿವಾಸಿಗಳು. ಕಮಲೇಶ್ ತಿವಾರಿ ಅವರ ಹತ್ಯೆ ಘಟನೆ ಬಳಿಕ ಅವರು ಪರಾರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News