2ನೇ ಬಾರಿಗೆ ಕೆನಡ ಸಂಸತ್ತಿಗೆ ಆಯ್ಕೆಯಾದ ಕನ್ನಡಿಗ ಚಂದ್ರಕಾಂತ್ ಆರ್ಯ
ಒಟ್ಟಾವ(ಕೆನಡ): ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊ ಅವರ ಲಿಬರಲ್ ಪಕ್ಷದಿಂದ ಸ್ಪರ್ಧಿಸಿರುವ ಕನ್ನಡಿಗ ಚಂದ್ರಕಾಂತ್ ಆರ್ಯ ಎರಡನೇ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಅವರು ಈ ಹಿಂದೆ 2015ರಲ್ಲಿ ನಡೆದ ಚುನಾವಣೆಯಲ್ಲೂ ವಿಜಯಿಯಾಗಿದ್ದರು.
ಅವರು ರಾಜಧಾನಿ ಒಟ್ಟಾವದಲ್ಲಿರುವ ನೇಪಿಯನ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು 45.6 ಶೇಕಡ ಮತಗಳನ್ನು ಪಡೆದರೆ, ಅವರ ಪ್ರಮುಖ ಎದುರಾಳಿ ಪ್ರೊಗ್ರೆಸಿವ್ ಕನ್ಸರ್ವೇಟಿವ್ ಪಕ್ಷದ ಬ್ರಯಾನ್ ಸೇಂಟ್ ಲೂಯಿಸ್ 33.5 ಶೇಕಡ ಮತಗಳನ್ನು ಪಡೆದರು.
ತುಮಕೂರು ಜಿಲ್ಲೆಯ ಸಿರಾ ತಾಲೂಕಿನವರಾಗಿರುವ 52 ವರ್ಷದ ಆರ್ಯ ನಿವೃತ್ತ ವಾಣಿಜ್ಯ ತೆರಿಗೆ ಸಹಾಯಕ ಕಮಿಶನರ್ ಕೆ. ಗೋವಿಂದ ಐಯರ್‌ರ ಪುತ್ರ.
ಅವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಇಂಜಿನಿಯರಿಂಗ್ ಪದವಿ ಪಡೆದರು. ಬಳಿಕ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿ ಗಳಿಸಿದರು.
ಕೆನಡಕ್ಕೆ ಹೋಗುವ ಮೊದಲು ಅವರು ದಿಲ್ಲಿಯಲ್ಲಿ ಡಿಆರ್‌ಡಿಒ ಮತ್ತು ಕರ್ನಾಟಕ ರಾಜ್ಯ ಹಣಕಾಸು ನಿಗಮದಲ್ಲಿ ಕೆಲಸ ಮಾಡಿದ್ದರು.