ಅನಧಿಕೃತ ಮರಳು ದಾಸ್ತಾನು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ: ಉಡುಪಿ ಜಿಲ್ಲಾಡಳಿತ

Update: 2019-10-23 16:02 GMT

ಉಡುಪಿ, ಅ.23: ಉಡುಪಿ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝಡ್) ಹಾಗೂ ಕರಾವಳಿ ನಿಯಂತ್ರಣ ವಲಯ ಹೊರತು ಪಡಿಸಿದ (ನಾನ್ ಸಿಆರ್‌ಝಡ್) ನದಿ ಪಾತ್ರಗಳಲ್ಲಿ ಮರಳು ದಿಬ್ಬ ತೆರವುಗೊಳಿಸಲು ಪರವಾನಿಗೆಯನ್ನು ನೀಡಲಾಗಿದ್ದು, ಅದರಂತೆ ಮರಳು ದಿಬ್ಬ ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಮಾಲಕರು, ಗುತ್ತಿಗೆದಾರರು ಹಾಗೂ ಮಂಜೂರಾದ ಕಟ್ಟಡದ ಕಾಮಗಾರಿಗಳ ಅವಶ್ಯಕತೆಗನುಗುಣವಾಗಿ ಮರಳನ್ನು ಸಾಗಾಟ ಪರವಾನಿಗೆಯೊಂದಿಗೆ ಉಪಯೋಗಿಸಬೇಕು. ಇದನ್ನು ಹೊರತು ಪಡಿಸಿ ಮರಳಿನ ದಾಸ್ತಾನು ಹಾಗೂ ಅನಧಿಕೃತ ಮರಳಿನ ದಾಸ್ತಾನು ಕಂಡುಬಂದಲ್ಲಿ ಇಂಥ ದಾಸ್ತಾನುಗಳ ಹಾಗೂ ಸಂಬಂಧಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಆದ್ದರಿಂದ ಕಟ್ಟಡ ನಿರ್ಮಾಣ ಮಾಲಕರು, ಗುತ್ತಿಗೆದಾರರು ಹಾಗೂ ಸಾರ್ವಜನಿಕರು ಮರಳು ದಾಸ್ತಾನು ಹಾಗೂ ಅನಧಿಕೃತ ಮರಳು ದಾಸ್ತಾನು ಮಾಡುವುದು ಹಾಗೂ ಮಾಡಿರುವುದು ಕಂಡುಬಂದಲ್ಲಿ ನಿಯಾಮಾನುಸಾರ ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಲಾಗುವುದು ಎಂದು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಹಿರಿಯ ಭೂವಿಜ್ಞಾನಿ ಹಾಗೂ ಸದಸ್ಯ ಕಾರ್ಯದರ್ಶಿ ಅವರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News