ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
Update: 2019-10-23 22:01 IST
ಉಡುಪಿ, ಅ.23: ವಿಪರೀತ ಮದ್ಯ ಸೇವನೆ ಚಟ ಹೊಂದಿದ್ದ ಕೊಪ್ಪಳ ಮೂಲದ ಹನಮಂತ ಜರಗಡಿ(27) ಎಂಬವರು ಮದ್ಯ ಸೇವನೆಗೆ ಹಣದ ತೊಂದರೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಅ.22ರಂದು ಸಂಜೆ ವೇಳೆ ಕಾಡಬೆಟ್ಟು ಧೂಮಾವತಿ ರಸ್ತೆಯ ಪುಳಿಮಾರು ಬಾಡಿಗೆ ಶೆಡ್‌ನ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಅಮಾಸೆಬೈಲು: ಕಾಲು ನೋವಿನಿಂದ ಮಾನಸಿಕವಾಗಿ ನೊಂದು ಅ.22 ರಂದು ಸಂಜೆ ವೇಳೆ ಮಡಾಮಕ್ಕಿ ಗ್ರಾಮದ ಮಾಂಡಿಮುರಕೈ ಬಸ್ ನಿಲ್ದಾಣದ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಡ್ತಲ ಗ್ರಾಮದ ಕಂಟೆಬೆಟ್ಟು ನಿವಾಸಿ ಸಂಜೀವ್ ಪೂಜಾರಿ ಎಂಬವರು ಅ.23ರಂದು ಬೆಳಗ್ಗೆ 6.15ರ ಸುಮಾರಿಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.