ದಿ ರಿಪಬ್ಲಿಕ್‍ಆಫ್ ಉಗಾಂಡಾದ ಹೈ ಕಮಿಷನ್ - ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡುವೆ ಒಡಂಬಡಿಕೆ

Update: 2019-10-23 17:04 GMT

ಮೂಡುಬಿದಿರೆ:  ಶೈಕ್ಷಣಿಕ ವಿನಿಮಯ ಮತ್ತು ಉತ್ತಮ ಬಾಂಧವ್ಯವನ್ನು ಪ್ರೋತ್ಸಾಹಿಸುವ ಸಲುವಾಗಿ ದಿ ರಿಪಬ್ಲಿಕ್‍ಆಫ್ ಉಗಾಂಡಾದ ಹೈ ಕಮಿಷನ್ ಮತ್ತು ಮೂಡುಬಿದಿರೆಯ  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನಡುವೆ  ಒಡಂಬಡಿಕೆ ಮಾಡಿಕೊಳ್ಳಲಾಯಿತು.

ದಿ ರಿಪಬ್ಲಿಕ್‍ಆಫ್ ಉಗಾಂಡಾದ ಹೈ ಕಮಿಷನ್‍ನನ್ನು ಪ್ರತಿನಿಧಿಸಿದ ಡೆಪ್ಯುಟಿ ಹೈ ಕಮಿಷನರ್ ಕೆಝಾಲಾ ಮೊಹಮ್ಮದ್ ಬಸ್ವಾರಿ ಬಿ. ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವನ್ನು ಪ್ರತಿನಿಧಿಸಿದ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಒಡಂಬಡಿಕೆಗೆ ಸಹಿ ಹಾಕಿದರು. 

ಒಡಂಬಡಿಕೆಯ ಪ್ರಕಾರ ಉಗಾಂಡ ಹೈ ಕಮಿಷನ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನಡುವೆ  ಪ್ರಾಧ್ಯಾಪಕರು, ಸಂಶೋಧನಾಕಾರರು, ಆಡಳಿತಾಧಿಕಾರಿಗಳು, ಔದ್ಯೋಗಿಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಮಿನಿಮಯ ನಡೆಯಲಿದೆ. ಜತೆಗೆ ಸಂಶೋಧನಾ ಸಲಕರಣೆಗಳು ಮತ್ತು ಗ್ರಂಥಗಳ ಕೊಡುಕೊಳ್ಳುವಿಕೆ ಮಾಡಿಕೊಳ್ಳಲಿವೆ. ಹೀಗೆ ಶಿಕ್ಷಣದ ಬಹುಮುಖ ಕ್ಷೇತ್ರದಲ್ಲಿನ ವಿನಿಮಯದಿಂದಾಗಿ ಸಂಶೋಧನೆಗಳನ್ನು ನಡೆಸಲು ಈ ಒಡಂಬಡಿಕೆ ಉಪಯುಕ್ತವಾಗಲಿದೆ. ವಿವಿಧ ಶೈಕ್ಷಣಿಕ ವಿಚಾರಗಳ ಬಗ್ಗೆ ಚರ್ಚಿಸಲು ಮುಕ್ತಮಾರ್ಗವನ್ನು ಕಲ್ಪಿಸಲಾಗುತ್ತದೆ. ಇದು ಐದು ವರ್ಷಗಳ ಒಡಂಬಡಿಕೆಯಾಗಿದ್ದು, ಬಳಿಕ ಎರಡು ಸಂಸ್ಥೆಗಳ ಒಪ್ಪಿಗೆಯ ಮೇರೆಗೆ ಈ ಒಡಂಬಡಿಕೆಯನ್ನು ಮುಂದುವರೆಸುವ ಅವಕಾಶವಿದೆ.

ಹ್ಯುಮನ್ ಅಚೀವರ್ಸ್ ಪ್ರತಿಷ್ಠಾನದ ಸ್ಥಾಪಕ ಮುಖ್ಯಸ್ಥೆ ಡಾ. ಸೆನೋರಿಟಾ ಐಸಾಕ್ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್‍ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News