ಸಿರಿಯ-ಟರ್ಕಿ ಗಡಿಯಲ್ಲಿ ಜಂಟಿ ಗಸ್ತಿಗೆ ರಶ್ಯ, ಟರ್ಕಿ ಒಪ್ಪಿಗೆ

Update: 2019-10-23 17:40 GMT

 ಸೋಚಿ (ರಶ್ಯ), ಅ. 23: ಸಿರಿಯ-ಟರ್ಕಿ ಗಡಿಗೆ ಸಮೀಪದಲ್ಲಿರುವ ಪ್ರದೇಶಗಳಿಂದ ಕುರ್ದಿಶ್ ಪಡೆಗಳು ವಾಪಸ್ ಹೋಗಿರುವುದನ್ನು ಖಚಿತಪಡಿಸುವುದಕ್ಕಾಗಿ ಜಂಟಿ ಗಸ್ತು ತಿರುಗುವ ವ್ಯವಸ್ಥೆಗೆ ರಶ್ಯ ಮತ್ತು ಟರ್ಕಿ ಮಂಗಳವಾರ ಒಪ್ಪಿಕೊಂಡಿವೆ.

ಅದೇ ವೇಳೆ, ಇದು ಐತಿಹಾಸಿಕ ಒಪ್ಪಂದ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಬಣ್ಣಿಸಿದ್ದಾರೆ.

ರಶ್ಯದ ದಕ್ಷಿಣದ ನಗರ ಸೋಚಿಯಲ್ಲಿ ನಡೆದ ಸುದೀರ್ಘ ಮಾತುಕತೆಗಳ ಬಳಿಕ, ಎರ್ದೊಗಾನ್ ಮತ್ತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜಂಟಿ ಗಸ್ತು ವ್ಯವಸ್ಥೆಯನ್ನು ಘೋಷಿಸಿದರು.

ಉತ್ತರ ಸಿರಿಯದಲ್ಲಿರುವ ಕುರ್ದಿಶ್ ಪಡೆಗಳ ನೆಲೆಗಳ ಮೇಲೆ ಟರ್ಕಿ ನಡೆಸುತ್ತಿದ್ದ ಸೇನಾ ಕಾರ್ಯಾಚರಣೆಗೆ ಐದು ದಿನಗಳ ವಿರಾಮ ನೀಡಲಾಗಿತ್ತು. ಈ ಕುರಿತ ಒಪ್ಪಂದವೊಂದಕ್ಕೆ ಟರ್ಕಿಗೆ ಭೇಟಿ ನೀಡಿದ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಮತ್ತು ಎರ್ದೊಗಾನ್ ಬಂದಿದ್ದರು. ಈಗ ಯುದ್ಧವಿರಾಮ ಅವಧಿ ಮಂಗಳವಾರ ಮುಕ್ತಾಯಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News