ಉಚ್ಚಿಲ ಸೋಮೇಶ್ವರದಲ್ಲಿ ತೀವ್ರ ಕಡಲ್ಕೊರೆತ: ನಾಲ್ಕು ತೆಂಗು ಸಮುದ್ರಪಾಲು
Update: 2019-10-24 11:57 IST
ಕೊಣಾಜೆ, ಅ.24: ಕಳೆದೆರಡು ದಿನಗಳಲ್ಲಿ ಹಿಂಗಾರು ಮಳೆ ಬಿರುಸುಗೊಂಡಿದ್ದರಿಂದ ಉಚ್ಚಿಲ ಸೋಮೇಶ್ವರ ಪ್ರದೇಶದಲ್ಲಿ ತೀವ್ರ ಕಡಲ್ಕೊರೆತ ಕಾಣಿಸಿಕೊಂಡಿದೆ.
ಸೋಮೇಶ್ವರ ದೇವಸ್ಥಾನ ಬಳಿಯ ಮೋಹನ್ ಎಂಬವರ ಮನೆಗೆ ಭಾರೀ ಅಲೆಗಳು ಅಪ್ಪಳಿಸುತ್ತಿವೆ. ಉಚ್ಚಿಲದ ಬಟ್ಟಂಪ್ಪಾಡಿ ಸಮೀಪ ನಾಲ್ಕುತೆಂಗಿನ ಮರಗಳು ಧರಾಶಾಹಿಯಾಗಿವೆ. ಪೇರಿಬೈಲ್ ಎಂಬಲ್ಲಿ ಝೊಹರಾ ಅಬ್ದುಲ್ಲ ಎಂಬವರ ಮನೆಗೂ ಸಮುದ್ರದ ದೈತ್ಯ ಅಲೆಗಳು ಅಪ್ಪಳಿಸುತ್ತಿವೆ.
ಉಚ್ಚಿಲದ ಕಾಂತಪ್ಪಣ್ಣ ಎಂಬವರ ಮನೆಗೂ ಸಮುದ್ರದ ಅಲೆಗಳು ಅಪ್ಪಳಿಸುತ್ತಿವೆ. ಸ್ಥಳೀಯರಲ್ಲಿ ಚಂಡಮಾರುತದ ಆತಂಕವೂ ಕಾಡುತ್ತಿದೆ.