×
Ad

ಇರಾ: ಗಾಳಿಮಳೆಗೆ ಕುಸಿದ ಮದ್ರಸದ ಶೌಚಾಲಯ; ಮನೆಗೆ ಹಾನಿ

Update: 2019-10-24 14:38 IST

 ಕೊಣಾಜೆ, ಅ.24: ಇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜಿಕಲ್ಲು ಎಂಬಲ್ಲಿ ಮದ್ರಸವೊಂದರ ಶೌಚಾಲಯ ಕಟ್ಟಡವು ಗಾಳಿಮಳೆಗೆ ಕುಸಿದು ಬಿದ್ದ ಪರಿಣಾಮ ಸಮೀಪದ ಮನೆಗೆ ಹಾನಿಯಾದ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದೆ.

ಬುಧವಾರ ರಾತ್ರಿಯಿಂದ ಈ ಭಾಗದಲ್ಲಿ ವಿಪರೀತ ಮಳೆ ಸುರಿಯುತ್ತಿರುವ ಪರಿಣಾಮ ಪಂಜಿಕಲ್ಲು ದರ್ಬಾಲ ಕಂಪೌಂಡ್ ಬಳಿ ಇರುವ ಮದ್ರಸವೊಂದರ ಶೌಚಾಲಯ ಕಟ್ಟಡವು ಸಮೀಪದ ಅಹ್ಮದ್ ಬಾವ ಎಂಬವರ ಮನೆಗೆ ಕುಸಿದು ಬಿದ್ದಿದೆ. ಕುಸಿತದಿಂದಾಗಿ ಮನೆಯ ಕಿಟಕಿ ಹಾಗೂ ಗೋಡೆಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News