ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ಎಸ್‌ಡಿಪಿಐ ಸ್ಪರ್ಧೆ: ಅಕ್ರಂ ಹಸನ್

Update: 2019-10-24 09:16 GMT

ಮಂಗಳೂರು, ಅ.19: ಹದಿನಾಲ್ಕು ಸ್ಥಳೀಯ ಸಂಸ್ಥೆಗಳಿಗೆ ನವೆಂಬರ್ 12ರಂದು ನಡೆಯುವ ಚುನಾವಣೆಯಲ್ಲಿ ಎಸ್‌ಡಿಪಿಐ ಎಲ್ಲ ಕಡೆಗಳಲ್ಲೂ ಸ್ಪರ್ಧಿಸಲಿದೆ. ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ 6 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಈಗಾಗಲೇ 25 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಎಸ್‌ಡಿಪಿಐ ಸಾಮಾನ್ಯ ಕಾರ್ಯಕರ್ತರನ್ನು ಚುನಾವಣೆಗೆ ಆಯ್ಕೆ ಮಾಡಿ ಅವಕಾಶ ನೀಡುತ್ತದೆ. ಪಕ್ಷದ ಆಂತರಿಕ ಆಯ್ಕೆ ಪ್ರಜಾಪ್ರಭುತ್ವದ ಮಾದರಿಯಲ್ಲಿ ನಡೆಯುತ್ತದೆ ಎಂದು ಅವರು ಹೇಳಿದರು.

ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿರುವ ಕಡೆ ಅಧಿಕಾರವನ್ನು ತಕ್ಷಣ ಚುನಾಯಿತ ಪ್ರತಿನಿಧಿಗಳಿಗೆ ನೀಡಬೇಕು. ಇದರ ವಿರುದ್ಧ ನಾವು ಕಾನೂನು ಹೋರಾಟಕ್ಕೂ ಸಿದ್ಧವಿರುವುದಾಗಿ ಅಕ್ರಮ ತಿಳಿಸಿದ್ದಾರೆ. 
 

*ಮನಪಾದಲ್ಲಿ 15 ವಾರ್ಡ್‌ಗಳಲ್ಲಿ ಸ್ಪರ್ಧೆ:
ಮಂಗಳೂರು ಮಹಾನಗರ ಪಾಲಿಕೆಗೆ ನಡೆಯುವ ಚುನಾವಣೆಯಲ್ಲಿ ಎಸ್ ಡಿ ಪಿ ಐ 15 ವಾರ್ಡ್ ಗಳಲ್ಲಿ ಸ್ಪರ್ಧಿಸಲಿದೆ. ಬಜಾಲ್ ವಾರ್ಡಿಗೆ ಅಭ್ಯರ್ಥಿಯಾಗಿ ಕಬೀರ್ ಬಜಾಲ್, ಬೆಂಗ್ರೆ - ಮುನೀಬ್ ಬೆಂಗ್ರೆ, ಕಣ್ಣೂರು - ಮಿಶ್ರಿಯಾ ಹನೀಪ್, ಕಾಟಿಪಳ್ಳ ಉತ್ತರ - ಸಂಶಾದ್ ಬಾನು, ಪಂಜಿಮೊಗರು - ಹನೀಫ್ ಕಾವೂರು, ಕುದ್ರೋಳಿ - ಮುಝೈರ್ ಕುದ್ರೋಳಿಯ ಹೆಸರು ಅಂತಿಮಗೊಳಿಸಲಾಗಿದೆ. ಉಳಿದ ವಾರ್ಡ್ ಮತ್ತು ಅಭ್ಯರ್ಥಿಗಳ ಹೆಸರು ಎರಡು ಮೂರು ದಿವಸಗಳೊಳಗಾಗಿ ಬಿಡುಗಡೆಗಿಳಿಸಲಾಗುವುದು ಎಂದು ಪಕ್ಷದ ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲಾ ತಿಳಿಸಿದ್ದಾರೆ.

 ಸುದ್ದಿಗೋಷ್ಠಿಯಲ್ಲಿ ಎಸ್ ಡಿಪಿಐ ರಾಜ್ಯ ಉಪಾಧ್ಯಕ್ಷ ಆ್ಯಂಟನಿ ಪಿ.ಡಿ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್.ಎಚ್., ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News