ವಾಣಿಜ್ಯ ಸಂಸ್ಥೆಯ ಮೇಲೆ ಐಟಿ ದಾಳಿ: 1,000 ಕೋಟಿ ರೂ. ತೆರಿಗೆ ವಂಚನೆ ಪತ್ತೆ

Update: 2019-10-24 14:24 GMT

ಹೊಸದಿಲ್ಲಿ, ಅ.24: ದಿಲ್ಲಿ ಮೂಲದ ವಾಣಿಜ್ಯ ಸಂಸ್ಥೆ ಅಲಂಕಿತ್ ಗ್ರೂಪ್ ಗೆ ಸೇರಿದ ಸುಮಾರು ಎರಡು ಡಜನ್ ಸ್ಥಳಗಳಲ್ಲಿ ದಾಳಿ ನಡೆಸಿದ ಐಟಿ ಅಧಿಕಾರಿಗಳು 1000 ಕೋಟಿ ರೂ. ತೆರಿಗೆ ವಂಚನೆ ಪ್ರಕರಣವನ್ನು ಬೇಧಿಸಿದ್ದಾರೆ. ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ನಂಟು ಹೊಂದಿದ ಹವಾಲಾ ವಹಿವಾಟಿಗೆ ಸಂಬಂಧಿಸಿದಂತೆ ಈ ಸಂಸ್ಥೆಯ ಮೇಲೆ ಐಟಿ ಇಲಾಖೆ ಹಲವು ಸಮಯದಿಂದ ನಿಗಾ ಇಟ್ಟಿತ್ತು.

ಈ ನಿರ್ದಿಷ್ಟ ಸಂಸ್ಥೆ ವಿವಿಧ ಇ-ಆಡಳಿತ ಯೋಜನೆಗಳು ಹಾಗೂ ವಿತ್ತೀಯ ಸೇವೆಗಳನ್ನು ಒದಗಿಸುತ್ತಿದೆಯಲ್ಲದೆ ದೇಶದ ಹಲವು ನಗರಗಳಲ್ಲಿ ಹಾಗೂ ದುಬೈಯಲ್ಲೂ ಕಚೇರಿ ಹೊಂದಿದೆ.

ಸಂಸ್ಥೆ ತೆರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆ ಹಾಗೂ ಹವಾಲಾ ವ್ಯವಹಾರಗಳಲ್ಲಿ ಸಂಸ್ಥೆ ತನ್ನನ್ನು ತೊಡಗಿಸಿಕೊಂಡಿದೆ ಎಂದು  ದಾಳಿಯಿಂದ ಬಹಿರಂಗಗೊಂಡಿದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿಯ ಹೇಳಿಕೆ ತಿಳಿಸಿದೆ.

ದಾಳಿ ಕುರಿತಂತೆ ಕಂಪೆನಿಯ ಆಡಳಿತ ನಿರ್ದೇಶಕ ಅಂಕಿತ್ ಅಗರ್ವಾಲ್ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News