×
Ad

ಭಾರೀ ಮಳೆ: ಚೆಲ್ಯಡ್ಕ ಸೇತುವೆ ಮುಳುಗಡೆ

Update: 2019-10-24 20:09 IST

ಪುತ್ತೂರು : ಪುತ್ತೂರು ತಾಲೂಕಿನಾದ್ಯಂತ ಬುಧವಾರ ರಾತ್ರಿಯಿಂದ ಸುರಿದ ಮಳೆಯಿಂದಾಗಿ ಪುತ್ತೂರು-ಪಾಣಾಜೆ ಸಂಪರ್ಕ ರಸ್ತೆಯಲ್ಲಿನ ಚೆಲ್ಯಡ್ಕ ಮುಳುಗು ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ.

ಪುತ್ತೂರು ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಭಾರೀ ಮಳೆಯಾಗಿತ್ತು. ಇದರಿಂದಾಗಿ ಚೆಲ್ಯಡ್ಕ ಮುಳುಗು ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಈ ರಸ್ತೆಯಲ್ಲಿ ನಿತ್ಯ ಸಂಚರಿಸುತ್ತಿದ್ದ ಖಾಸಗಿ ಬಸ್ಸುಗಳು ಸೇರಿದಂತೆ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಖಾಸಗಿ ಬಸ್ಸುಗಳು ಮಾಣಿ-ಮೈಸೂರು ಹೆದ್ದಾರಿಯಾಗಿ ಸಂಟ್ಯಾರು-ಕೈಕಾರ ಮೂಲಕವಾಗಿ ಓಡಾಟ ನಡೆಸುತ್ತಿವೆ.

ಚೆಲ್ಯಡ್ಕ, ಗುಮ್ಮಟೆಗದ್ದೆ, ಅಜ್ಜಿಕಲ್ಲು, ಒಳತ್ತಡ್ಕ ಭಾಗದ ಮಂದಿ ಖಾಸಗಿ ಬಸ್ಸುಗಳನ್ನೇ ಅವಲಂಬಿಸಿಕೊಂಡಿದ್ದು, ಬಸ್ಸುಗಳ ಓಡಾಟ ಸ್ಥಗಿತಗೊಂಡ ಹಿನ್ನಲೆಯಲ್ಲಿ ಈ ಭಾಗದ ಮಂದಿ ಸಮಸ್ಯೆಗೊಳಗಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News