×
Ad

ಕ್ಯೂಎಸ್ ಭಾರತೀಯ ವಿವಿ ರ್ಯಾಂಕಿಂಗ್: ಮಾಹೆಗೆ 26ನೇ ಸ್ಥಾನ

Update: 2019-10-24 21:31 IST

ಉಡುಪಿ, ಅ.24: ಎರಡು ದಿನಗಳ ಹಿಂದೆ ಪ್ರಕಟವಾದ ಕ್ಯೂಎಸ್ ಭಾರತೀ ವಿವಿ ರ್ಯಾಂಕಿಂಗ್-2020ರಲ್ಲಿ ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಭಾರತದ ಖಾಸಗಿ ವಿವಿಗಳಲ್ಲಿ ಮೂರನೇ ಹಾಗೂ ಒಟ್ಟಾರೆಯಾಗಿ 26ನೇ ಸ್ಥಾನವನ್ನು ಪಡೆದಿದೆ.

ಈ ಬಾರಿ ಭಾರತದ ಒಟ್ಟು 100 ವಿವಿಗಳನ್ನು ರ್ಯಾಂಕಿಂಗ್‌ಗಾಗಿ ಪರಿಗಣಿಸಲಾಗಿದ್ದು, ಮಾಹೆ ಕಳೆದ ವರ್ಷದ ತನ್ನ ಸ್ಥಾನವನ್ನು ಉಳಿಸಿ ಕೊಂಡಿದೆ. ಮಾಹೆಯ ಕುಲಪತಿ ಡಾ.ಎಚ್.ವಿನೋದ್ ಭಟ್ ಅವರು ಗೋವಾದ ಪಣಜಿಯಲ್ಲಿ ನಡೆದ ಕ್ಯೂಎಸ್ ಇಂಡಿಯಾ ಶೃಂಗಸಭೆಯಲ್ಲಿ ಭಾರತ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ.ರಮೇಶ್ ಪೊಕ್ರಿಯಾಲ್‌ರಿಂದ ಮಾಹೆ ಪರವಾಗಿ ರ್ಯಾಂಕಿಂಗ್ ಸರ್ಟಿಫಿಕೇಟ್‌ನ್ನು ಸ್ವೀಕರಿಸಿದರು.

ಕ್ಯೂಎಸ್, ಜಾಗತಿಕ ರ್ಯಾಂಕಿಂಗ್‌ಗಾಗಿ ಪರಿಗಣಿಸುವ ಮಾನದಂಡವನ್ನು ಭಾರತೀಯ ವಿವಿಗಳ ರ್ಯಾಂಕಿಂಗ್‌ಗೂ ಅಳವಡಿಸಿದ್ದು, ಇವುಗಳಲ್ಲಿ ವಿವಿಗಳ ಶೈಕ್ಷಣಿಕ ಪ್ರತಿಷ್ಠೆ, ಅಲ್ಲಿನ ಸಿಬ್ಬಂದಿಗಳ ಪ್ರತಿಷ್ಠೆ, ವಿದ್ಯಾರ್ಥಿಗಳು ಹಾಗೂ ಪ್ರಾದ್ಯಾಪಕರ ಅನುಪಾತಗಳನ್ನು ರ್ಯಾಂಕಿಂಗ್ ವೇಳೆ ಗಣನೆಗೆ ತೆಗೆದುಕೊಂಡಿ ದ್ದರು.

ಮಾಹೆ ಭಾರೀ ಗಾತ್ರದ ವಿವಿ ಸಾಲಿನಲ್ಲಿ ಸಂಶೋಧನೆಯ ಸಾಂದ್ರತೆ, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ 7ನೇ ಹಾಗೂ ಪ್ರಾಧ್ಯಾಪಕರು- ವಿದ್ಯಾರ್ಥಿಗಳ ಅನುಪಾತದಲ್ಲಿ 12ನೇ ಸ್ಥಾನ ಪಡೆದಿದೆ ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News