×
Ad

ಮಣಿಪಾಲ: ವಾಗ್ಷಾ ಪ್ರಾಂಶುಪಾಲರಿಗೆ ರಾ.ಗೌರವ

Update: 2019-10-24 21:32 IST

ಮಣಿಪಾಲ, ಅ.24: ಮಣಿಪಾಲದ ವೆಲ್‌ಕಮ್ ಗ್ರೂಫ್ ಗ್ರಾಜ್ಯುವೇಟ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿನಿಸ್ಟ್ರೇಶನ್ (ವಾಗ್ಷಾ)ನ ಪ್ರಾಂಶುಪಾಲ ರಾದ ಚೆಫ್ ಕೆ.ತಿರುನಾನಾಸಂಬಂಧನ್ ಅವರಿಗೆ ಹೊಸದಿಲ್ಲಿಯಲ್ಲಿ ನಡೆದ 8ನೇ ಐಎಫ್‌ಸಿಎ ಅಂತಾರಾಷ್ಟ್ರೀಯ ಬಾಣಸಿಗರ ಸಮ್ಮೇಳನದಲ್ಲಿ ವಿಶೇಷ ರಾಷ್ಟ್ರೀಯ ಗೌರವ ನೀಡಿ ಸನ್ಮಾನಿಸಲಾಯಿತು.

 ತಿರು ಅವರು ಹೊಟೇಲ್ ಮ್ಯಾನೇಜ್‌ಮೆಂಟ್‌ನಲ್ಲಿ ತೋರಿದ ಅಸಾಧಾರಣ ಸಾಧನೆಗಾಗಿ ಇಂಡಿಯನ್ ಫೆಡರೇಷನ್ ಆಫ್ ಕಲನರಿ ಅಸೋಸಿಯೇಷನ್ (ಐಎಫ್‌ಸಿಎ) ವಿಶೇಷ ಪ್ರಶಸ್ತಿ ನೀಡಿ ಸಮ್ಮೇಳನ ಸಂದರ್ಭದಲ್ಲಿ ಗೌರವಿಸಿತು.

ಅಡುಗೆ ಕ್ಷೇತ್ರ ಹಾಗೂ ವಿದ್ಯಾರ್ಥಿಗಳಲ್ಲಿ ಅಡುಗೆ ಕಲೆ ಹಾಗೂ ವಿಜ್ಞಾನದ ಬಗ್ಗೆ ಆಸಕ್ತಿ ಮೂಡುವಂತೆ ಮಾಡುತ್ತಿರುವುದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಚೆಫ್ ತಿರು ಅವರಿಗೆ ಲಭಿಸುತ್ತಿರುವ ಸತತ ಮೂರನೇ ಪ್ರಶಸ್ತಿ ಇದಾಗಿದೆ. 2017-18ರಲ್ಲಿ ಅವರು ತೆಲಂಗಾಣ ಪ್ರವಾಸೋದ್ಯಮ ದಿಂದಲೂ ಅವರು ಅಡುಗೆ ಶಿಕ್ಷಣಕ್ಕಾಗಿ ಪ್ರಶಸ್ತಿಯನ್ನು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News