ಅ.27: ತುಳು ಲಿಪಿ ಕಲಿಯುವ ಕಾರ್ಯಕ್ರಮ
Update: 2019-10-24 22:22 IST
ಮಂಗಳೂರು, ಅ.24: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ನಮ್ಮ ತುಳುನಾಡ್ ಟ್ರಸ್ಟ್(ರಿ) ಹಾಗೂ ಕ-ನಾದ ಕೀಲಿಮಣೆ ಇದರ ಜಂಟಿ ಆಶ್ರಯದಲ್ಲಿ ‘ಬಲೇ ತುಳು ಲಿಪಿ ಕಂಪ್ಯೂಟರ್‌ಡ್ ಕಲ್ಪುಗ’ ಕಾರ್ಯಕ್ರಮವನ್ನು ಅ.27ರಂದು ಪೂರ್ವಾಹ್ನ 11 ಗಂಟೆಗೆ ತುಳು ಭವನದ ಸಿರಿ ಚಾವಡಿಯಲ್ಲಿ ಆಯೋಜಿಸಲಾಗಿದೆ.
ತುಳು ಲಿಪಿಯನ್ನು ಕಂಪ್ಯೂಟರ್ ಹಾಗೂ ಮೊಬೈಲ್ನಲ್ಲಿ ಬರೆಯುವುದು ಹೇಗೆ? ಎಂದು ಡಿಜಿಟಲ್ ಜಗತ್ತಿಗೆ ತಿಳಿಸಿಕೊಡುವ ಕಾರ್ಯಕ್ರಮ ಇದಾಗಿದೆ ಎಂದು ಅಕಾಡಮಿ ತಿಳಿಸಿದೆ.