ಭಾರೀ ಮಳೆ: ಕಾಪು ತಾಲ್ಲೂಕಿನ ಎರಡು ಮನೆಗಳಿಗೆ ಹಾನಿ
Update: 2019-10-24 22:34 IST
ಕಾಪು: ಕಾಪು ತಾಲ್ಲೂಕಿನಲ್ಲಿ ಗುರುವಾರ ಸುರಿದ ಭಾರೀ ಮಳೆ ಹಾಗೂ ಗಾಳಿಗೆ ಎರಡು ಮನೆಗಳಿಗೆ ಹಾನಿಯಾಗಿವೆ.
ಕುತ್ಯಾರು ಗ್ರಾಮದ ಇರಂದಾಡಿ ಎಂಬಲ್ಲಿ ಸಾಕು ಶೆಟ್ಟಿ ಇವರ ಮನೆಗೆ ಗಾಳಿಗೆ ಮಳೆಗೆ ಹಾನಿಯಾಗಿವೆ. ಹಾನಿಯ ನಷ್ಟ ಸುಮಾರು 40 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಬಡಾ ಗ್ರಾಮದ ರಘು ಆರ್. ದೇವಾಡಿಗ ಇವರ ಮನೆಗೆ ಗಾಳಿ ಮಳೆಯಿಂದ ತೆಂಗಿನ ಮರ ಬಿದ್ದು ಹಾನಿಯಾಗಿದ್ದು, 50 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಮಳೆ ಗಾಳಿಗೆ ಪಡುಬಿದ್ರಿ-ಕಾರ್ಕಳ ಮುಖ್ಯ ರಸ್ತೆಯ ಅಡ್ವೆ ಭಾಗದಲ್ಲಿ ಬೃಹತ್ ಜಾಹಿರಾತು ಫಲಕವೊಂದು ರಸ್ತೆಯ ಮೇಲೆ ವಾಲಿದೆ. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.