ಮಂಗಳೂರು: ಉದ್ಯಮಿ ಹಾತೀಂ ಹಾಜಿ ನಿಧನ
Update: 2019-10-24 23:52 IST
ಮಂಗಳೂರು, ಅ.24: ನಗರದ ಫಳ್ನೀರ್ ನಿವಾಸಿ, ಉದ್ಯಮಿ ಹಾತೀಂ ಹಾಜಿ (78) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ರಾತ್ರಿ ಆಸ್ಪತ್ರೆಯಲ್ಲಿ ನಿಧನರಾದರು.
ರಾಯಲ್ ಸೀ ಫುಡ್‌ನ ಮಾಲಕರಾಗಿದ್ದ ಹಾತೀಂ ಹಾಜಿ, ಸಿಫುಡ್ ಬಯ್ಯರ್ಸ್ ಅಯೋಸಿಯೇಶನ್‌ನ ಸದಸ್ಯರಾಗಿದ್ದರು.
ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಅಂತ್ಯ ಸಂಸ್ಕಾರವು ಶುಕ್ರವಾರ ಜುಮಾ ನಮಾಝ್‌ಗೆ ಮೊದಲು ಬಂದರ್‌ನ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.