ಭಾರೀ ಮಳೆಗೆ ಲಂಗರು ಹಾಕಿದ ಬೋಟುಗಳು: ಕರಾವಳಿ ರಕ್ಷಣಾ ಪಡೆಯ ನೌಕೆಯ ಕಾರ್ಯಾಚರಣೆಗೆ ಅಡಚಣೆ
Update: 2019-10-25 19:53 IST
ಮಂಗಳೂರು, ಅ.25: ಅರಬ್ಬಿ ಸಮುದ್ರದಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು, ದ.ಕ. ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಮಳೆಯ ಕಾರಣ ಭಾರೀ ಸಂಖ್ಯೆಯ ಮೀನುಗಾರಿಕಾ ಬೋಟುಗಳು ಲಂಗರು ಹಾಕಿವೆ. ಇದರಿಂದ ಕರಾವಳಿ ರಕ್ಷಣಾ ಪಡೆಯ ನೌಕೆಗೆ ಕಾರ್ಯಾಚರಣೆ ನಡೆಸಲು ಅಡಚಣೆಯಾಗಿದೆ.
ಬಂದರು ಪ್ರವೇಶಿಸುವ ಭಾಗದಲ್ಲಿಯೇ ಸುಮಾರು 200ಕ್ಕೂ ಅಧಿಕ ಬೋಟುಗಳು ಲಂಗರು ಹಾಕಿವೆ. ಸಮುದ್ರದಲ್ಲಿ ಪರಿಹಾರ ಮತ್ತು ಹುಡುಕಾಟ ಕಾರ್ಯಾಚರಣೆ ನಡೆಸಲು ಕರಾವಳಿ ರಕ್ಷಣಾ ಪಡೆಯ ನೌಕೆಗೆ ಸಂಕಷ್ಟ ಬಂದಿದೆ.