×
Ad

ಲಾರಿ ಢಿಕ್ಕಿ: ಸ್ಕೂಟರ್ ಹಿಂಬದಿ ಸವಾರ ಮೃತ್ಯು

Update: 2019-10-25 21:25 IST

ಬ್ರಹ್ಮಾವರ, ಅ.25: ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಹಿಂಬದಿ ಸವಾರ ಮೃತಪಟ್ಟ ಘಟನೆ ಬ್ರಹ್ಮಾವರ ಧರ್ಮಾವರಂ ಆಡಿಟೋರಿ ಯಂ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅ.24ರಂದು ಸಂಜೆ ವೇಳೆ ನಡೆದಿದೆ.

ಮೃತರನ್ನು ರೋನಕ್ ಸುವರ್ಣ ಎಂದು ಗುರುತಿಸಲಾಗಿದೆ. ಸ್ಕೂಟರ್ ಸವಾರ ಕಲ್ಮಾಡಿ ನಿವಾಸಿ ಶಶಿಧರ ಬಿ.ಬಂಗೇರ(38) ತೀವ್ರವಾಗಿ ಗಾಯ ಗೊಂಡಿದ್ದಾರೆ. ಇವರು ಆಕ್ಟೀವಾ ಸುಜುಕಿ ಸ್ಕೂಟರ್‌ನಲ್ಲಿ ಬ್ರಹ್ಮಾವರ ಕಡೆಯಿಂದ ಸಾಸ್ತಾನ ಕಡೆಗೆ ಹೋಗುತ್ತಿದ್ದರು. ಆಗ ಎದುರಿನಲ್ಲಿ ಹೋಗು ತ್ತಿದ್ದ ಓಮ್ನಿ ಕಾರು ಒಮ್ಮೆಲೆ ಎಡಕ್ಕೆ ಚಲಿಸಿತು ಎನ್ನಲಾಗಿದೆ.

ಈ ಸಂದರ್ಭ ಹಿಂಬದಿಯಿಂದ ಬಂದ ಲಾರಿ ಸ್ಕೂಟರ್ ಹಾಗೂ ಕಾರಿಗೆ ಢಿಕ್ಕಿ ಹೊಡೆಯಿತು. ಇದರ ಪರಿಣಾಮ ಸ್ಕೂಟರ್ ಲಾರಿ ಅಡಿಗೆ ಬಿದ್ದು, ರೋನಕ್ ಸುವರ್ಣ ಲಾರಿಯ ಚಕ್ರದ ಅಡಿಗೆ ಸಿಲುಕಿದರು. ಗಂಭೀರವಾಗಿ ಗಾಯಗೊಂಡ ರೋನಕ್ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.

ಶಶಿಧರ ಬಿ.ಬಂಗೇರ ರಸ್ತೆಗೆ ಎಸೆಯಲ್ಪಟ್ಟು ತೀವ್ರವಾಗಿ ಗಾಯ ಗೊಂಡಿದ್ದಾರೆ. ಲಾರಿ ಚಾಲಕನು ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಈ ಬಗ್ಗೆ ಬಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News