×
Ad

ಗಾಂಜಾ ಸೇವನೆ: ಇಬ್ಬರು ವಶಕ್ಕೆ

Update: 2019-10-25 21:25 IST

ಉಡುಪಿ, ಅ.25: ಮಣಿಪಾಲ ವಿದ್ಯಾರತ್ನ ನಗರದ ಸತ್ಕಾರ್ ಪ್ಯಾರಡೈಸ್ ಬಳಿ ಅ.24ರಂದು ಮಧ್ಯಾಹ್ನ ಗಾಂಜಾ ಸೇವಿಸುತ್ತಿದ್ದ ಇಬ್ಬರನ್ನು ಉಡುಪಿ ಸೆನ್ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೈಭವ್ ಕುಮಾರ್ ರಾಜಪೂತ್ ಮತ್ತು ಸಪತಂಗ್ಷು ಘೋಶ್ ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಕೆಎಂಸಿ ಫಾರೆನ್ಸಿಕ್ ವಿಭಾಗದಿಂದ ಪರೀಕ್ಷೆಗೆ ಒಳ ಪಡಿಸಿದ್ದು, ಈ ವರದಿಯಲ್ಲಿ ಇವರಿಬ್ಬರು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿದೆ ಎಂದು ಪೊಲೀಸು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News