ವಲಸೆ ಕಾರ್ಮಿಕರಿಗೆ ಹಲ್ಲೆ: ಸಿಐಟಿಯು ಖಂಡನೆ
Update: 2019-10-25 21:33 IST
ಉಡುಪಿ, ಅ.25: ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿ ವಲಸೆ ಕಾರ್ಮಿಕ ಶೇಖರ್ ಎಂಬವರಿಗೆ ಮಠದಬೆಟ್ಟುವಿನ ಯುವಕರ ತಂಡ ಸ್ವಚ್ಛತೆ ಹೆಸರಿನಲ್ಲಿ ವಯರ್‌ನಿಂದ ಹಲ್ಲೆ ನಡೆಸಿರುವ ಘಟನೆಯನ್ನು ಸಿಐಟಿಯು ಉಡುಪಿ ತಾಲೂಕು ಸಮಿತಿ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಸಿಐಟಿಯು ಜಿಲ್ಲಾ ಸಮಿತಿ ಸದಸ್ಯ ಸಂತೋಷ ಪೂಜಾರಿ ಸಂಬಂಧ ಪಟ್ಟ ಯುವಕರೊಂದಿಗೆ ಮಾತನಾಡಿ ಕಾನೂನು ಕೈಗೆತ್ತಿಕೊಳ್ಳು ವುದು ಸರಿಯಲ್ಲವೆಂದು ತಿಳಿಸಿದರೂ ಮತ್ತೆ ಹಲ್ಲೆ ನಡೆಸಿರುವುದು ತಿಳಿದುಬಂದಿದೆ. ಈ ವಿಷಯವನ್ನು ಈಗಾಗಲೇ ನಗರ ಪೊಲೀಸ್ ಠಾಣೆಯ ಗಮನಕ್ಕೆ ತರಲಾಗಿದೆ ಹಾಗೂ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ ಎಂದು ಸಿಐಟಿಯು ಉಡುಪಿ ತಾಲೂಕು ಕಾರ್ಯದರ್ಶಿ ಕವಿರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.