×
Ad

ಸಾಲ ವಸೂಲಾತಿ ಮರುಪಾವತಿ ಅಭಿಯಾನ

Update: 2019-10-25 21:43 IST

ಉಡುಪಿ, ಅ. 25: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ತನ್ನ ವಿವಿಧ ಸಾಲ ಯೋಜನೆಗಳ ಸಾಲ ವಸೂಲಾತಿ ಹಾಗೂ ಮರುಪಾವತಿ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ನ.1ರಿಂದ 30ರವರೆಗೆ ಕೈಗೊಂಡಿದ್ದು, ನ.12ರಂದು ಯಡ್ತರೆ ಗ್ರಾಪಂ ಕಚೇರಿ ಬೈಂದೂರು, ನ.16ರಂದು ಕುಂದಾಪುರ ತಾಲೂಕು ಪಂಚಾಯತ್ ಕಚೇರಿ, ನ.19ರಂದು ಕಾಪು ಪುರಸಬೆ ಕಚೇರಿ, ನ. 25ರಂದು ವಾರಂಬಳ್ಳಿ ಗ್ರಾಪಂ ಕಚೇರಿ ಬ್ರಹ್ಮಾವರ ಹಾಗೂ ನ. 27ರಂದು ಕಾರ್ಕಳ ತಾಪಂ ಕಚೇರಿಯಲ್ಲಿ ಸಾಲ ವಸೂಲಾತಿ ಮರುಪಾವತಿ ಅಭಿಯಾನ ಹಮ್ಮಿ ಕೊಳ್ಳಲಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News