×
Ad

ಅ.27: ಕೆ.ಸಿ.ರೋಡ್‌ನಲ್ಲಿ ಹುಬ್ಬುರ್ರಸೂಲ್ ಕಾನ್ಫರೆನ್ಸ್

Update: 2019-10-25 22:34 IST

ಮಂಗಳೂರು, ಅ.25: ತಲಪಾಡಿ ರೇಂಜ್ ಸುನ್ನಿ ಕೋ-ಓರ್ಡಿನೇಶನ್ ಕಮಿಟಿಯ ಅಧೀನದಲ್ಲಿರುವ ಎಸ್‌ಜೆಯು, ಎಸ್‌ಜೆಎಂ, ಎಸ್‌ಎಂಎ, ಎಸ್ಸೆಸ್ಸೆಫ್, ಎಸ್‌ವೈಎಸ್ ವತಿಯಿಂದ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಅ.27ರಂದು ಸಂಜೆ 4 ಗಂಟೆಗೆ ಕೆ.ಸಿ. ರೋಡ್ ಜಂಕ್ಷನ್ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.

ಬೆಳಿಗ್ಗೆ 8:30ಕ್ಕೆ ಎಎಮ್‌ಜೆಎಮ್ ಕೆ.ಸಿ.ರೋಡ್ ಅಧ್ಯಕ್ಷ ಮತ್ತು ಸ್ವಾಗತ ಸಮಿತಿಯ ಕೋಶಾಧಿಕಾರಿ ಕೆ.ಎಂ. ಅಬ್ಬಾಸ್ ಕೊಳಂಗರೆ ಧ್ವಜಾರೋಹಣ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ತಲಪಾಡಿ ಬಿಲಾಲ್ ಜುಮಾ ಮಸೀದಿುಂದ ಕೆ.ಸಿ.ರೋಡ್ ತಾಜುಲ್ ಉಲಮಾ ವೇದಿಕೆಗೆ ಮರ್‌ಹಬಾ ಯಾ ಶಹ್‌ರ ರಬೀಅ್ ರ್ಯಾಲಿ ನಡೆಯಲಿದ್ದು, ಅಜ್ಜಿನಡ್ಕದ ಮಅ್ವುಲ್ ವರಾ ಬುರ್ದಾ ತಂಡದಿಂದ ಬುರ್ದಾ ಮಜ್ಲಿಸ್ ನಡೆಯಲಿದೆ.

ಅಸೈಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಕಾರ್ಯಕ್ರಮ ಉದ್ಘಾಟಿಸುವರು. ಎಸ್‌ಜೆಯು ಕರ್ನಾಟಕ ರಾಜ್ಯ ಸಮಿತಿಯ ಉಪಾಧ್ಯಾಕ್ಷ ಕೆ.ಪಿ. ಹುಸೈನ್ ಸಅದಿ ಕೆ.ಸಿ. ರೋಡ್ ಅಧ್ಯಕ್ಷತೆ ವಹಿಸಲಿದ್ದಾರೆ. 407 ಜೆಎಂಎಸ್ ಉಚ್ಚಿಲ ಮುದರ್ರಿಸ್ ಇಬ್ರಾಹೀಂ ಫೈಝಿ, ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಸಂದೇಶ ಭಾಷಣ ಹಾಗೂ ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ ಮುಖ್ಯ ಪ್ರಭಾಷಣ ಮಾಡಲಿರುವರು.

ಅಸೈಯದ್ ಸಿಟಿಎಂ ಸಲೀಂ ಅಸ್ಸಖಾಫ್ ಕೆ.ಸಿ. ರೋಡ್, ದ.ಕ.ಜಿಲ್ಲಾ ಎಸ್‌ವೈಎಸ್ ಅಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ, ಎಮ್‌ಜೆಎಮ್ ಕೆ.ಸಿ. ರೋಡ್ ಮುದರ್ರಿಸ್ ಮುನೀರ್ ಸಖಾಫಿ, ಶಾಸಕ ಯು.ಟಿ. ಖಾದರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಎಸ್‌ಜೆಯು ಕರ್ನಾಟಕ ರಾಜ್ಯ ಸಮಿತಿಯ ಉಪಾಧ್ಯಾಕ್ಷ ಮತ್ತು ಜಾಮಿಯಾ ಸಅದಿಯ ದೇಳಿ ಕಾಸರಗೋಡು ಇದರ ಪ್ರೊಫೆಸರ್ ಹಾಗೂ ಸುನ್ನೀ ಕೋ ಆರ್ಡಿನೇಶನ್ ತಲಪಾಡಿ ರೇಂಜ್‌ನ ಅಧ್ಯಕ್ಷ ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ತಲಪಾಡಿ ರೇಂಜ್‌ಗೊಳಪಟ್ಟ ಪಬ್ಲಿಕ್ ಪರೀಕ್ಷೆಯಲ್ಲಿ 5,7, 10ನೇ ತರಗತಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಮಸ್ಜಿದುಲ್ ಹಿದಾಯ ಅಧ್ಯಕ್ಷ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷ ಎನ್.ಎಸ್. ಉಮರ್ ಮಾಸ್ಟರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News