ಗುರುಪುರ ಗ್ರಾಪಂಗೆ ರಾಷ್ಟ್ರೀಯ ಪ್ರಶಸ್ತಿ

Update: 2019-10-25 17:05 GMT

ಗುರುಪುರ, ಅ.25 : ‘ನಮ್ಮ ಗ್ರಾಮ, ನಮ್ಮ ಯೋಜನೆ’ಯಡಿ(ಜಿಪಿಡಿಪಿ) ಸರ್ವಶ್ರೇಷ್ಠ ಸಾಧನೆ ಮಾಡಿರುವ ಗ್ರಾಪಂಗಳಿಗೆ ಕೇಂದ್ರ ಸರಕಾರದ ಪಂಚಾಯತ್ ರಾಜ್ ಸಚಿವಾಲಯದಿಂದ ನೀಡಲ್ಪಡುವ 2019ನೇ ಸಾಲಿನ ‘ಗ್ರಾಮ ಪಂಚಾಯತ್ ಅಭಿವೃದ್ಧಿ’ ಪ್ರಶಸ್ತಿಗೆ ಗುರುಪುರ ಗ್ರಾಪಂ ಆಯ್ಕೆಯಾಗಿದೆ.

ದೇಶದಲ್ಲೇ ದ್ವಿತೀಯ ಸ್ಥಾನ ಪಡೆದಿರುವ ಗುರುಪುರ ಗ್ರಾಪಂಗೆ ಗ್ರಾಮದ ಅಭಿವೃದ್ಧಿಗೆ ಕೇಂದ್ರ ಸರಕಾರ ಇನ್ನಷ್ಟು ಅನುದಾನ ಬಿಡುಗಡೆ ಮಾಡಲಿದೆ. ಕೇರಳದ ಕಣ್ಣೂರು ಜಿಲ್ಲೆಯ ಪಪ್ಪಿನಿಚ್ಚೇರಿ ಗ್ರಾಪಂ ಪ್ರಥಮ ಹಾಗೂ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕರಕಂಬಾಡಿ ಗ್ರಾಪಂ ತೃತೀಯ ಪ್ರಶಸ್ತಿ ಗಳಿಸಿದೆ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ. ಸಾಹೀಬ್ ಪಟ್‌ಜೋಶಿ ಪ್ರಕಟನೆ ತಿಳಿಸಿದೆ.

ಪ್ರಶಸ್ತಿ ಬಂದುದರ ಕುರಿತು ಗ್ರಾಪಂ ಅಧ್ಯಕ್ಷೆ ರುಕಿಯಾ ಗ್ರಾಮದಲ್ಲಿ ಸರಕಾರಿ ಯೋಜನೆಗಳ ಅನುಷ್ಠಾನಕ್ಕಾಗಿ ಉಪಾಧ್ಯಕ್ಷರಿಂದ ಹಿಡಿದು, ಸದಸ್ಯರು, ಜಿಪಂ ಹಾಗೂ ತಾಪಂ ಸದಸ್ಯರು ಅತ್ಯಂತ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಈ ಮೂಲಕ ಗ್ರಾಮದ ಅಭಿವೃದ್ಧಿಯಾಗಿದೆ. ಈ ಕೆಲಸ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News