ಪವಿತ್ರ ಕುರ್‌ಆನ್ ಬಣ್ಣಿಸಿದ ಪ್ರವಾದಿ ಮುಹಮ್ಮದ್ ಕೃತಿ ಬಿಡುಗಡೆ
ಮಂಗಳೂರು, ಅ.25: ಎಂ.ಎ. ಇಸ್ಮಾಈಲ್ ನಈಮಿ ಮಂಗಳಪೇಟೆ ಬರೆದ ಪವಿತ್ರ ಕುರ್‌ಆನ್ ಬಣ್ಣಿಸಿದ ಪ್ರವಾದಿ ಮುಹಮ್ಮದ್ (ಸ) ಕೃತಿಯು ಗುರುವಾರ ಅಲ್ ಅನ್ಸಾರ್ ಪತ್ರಿಕಾಲಯದಲ್ಲಿ ಬಿಡುಗಡೆಗೊಂಡಿತು.
ಅಲ್ ಅನ್ಸಾರ್ ಸಂಪಾದಕ ಎಸ್.ಪಿ. ಹಂಝ ಸಖಾಫಿ ಬಂಟ್ವಾಳ ಅಲ್ ಅನ್ಸಾರ್ ಪ್ರಕಾಶಕ ಇಬ್ರಾಹೀಮ್ ಬಾವ ಹಾಜಿ ಮಂಗಳೂರು ಅವರಿಗೆ ಹಸ್ತಾಂತರಿಸಿ ಕೃತಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಎಸ್‌ವೈಎಸ್ ರಾಜ್ಯಾಧ್ಯಕ್ಷ ಜಿ.ಎಂ.ಕಾಮಿಲ್ ಸಖಾಫಿ, ಪಾಣೆಮಂಗಳೂರು ಜಾಮಿಯಾ ಮುಈನಿಯ್ಯಾ ಅಜ್ಮೀರ್ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಫಿಳ್ ಮುಹಮ್ಮದ್ ವಹೀದ್ ನಈಮಿ ಅಲ್ ಕಾಮಿಲ್ ಕುಂಬ್ರ, ಅಲ್ ಅನ್ಸಾರ್ ಅಂಕಣಕಾರ ಎಂ.ಎ.ಇಸ್ಮಾಈಲ್ ಸಅದಿ ಅಲ್ ಅಫ್ಳಲಿ ಮಾಚಾರ್, ಅಲ್ ಅನ್ಸಾರ್ ಪ್ರಸಾರ ನಿರ್ವಾಹಕ ಕೆ.ಬಿ. ಅಬ್ದುಲ್ ಅಝೀಝ್ ವೇಣೂರು, ಲೇಖಕ ಎಂ.ಎ.ಇಸ್ಮಾಈಲ್ ನಈಮಿ ಮಂಗಳಪೇಟೆ, ಎಚ್‌ಎಚ್ ಇಂಟರ್ ನ್ಯಾಶನಲ್ ಸ್ಕೂಲ್ ಕುತ್ತಾರು ಇದರ ವ್ಯವಸ್ಥಾಪಕ ಶಂಸುದ್ದೀನ್, ಮಲಬಾರಿ ಅಬ್ದುಲ್ ಸತ್ತಾರ್, ಅನಿಲ್ ಕುಮಾರ್ ಉಳ್ಳಾಲ, ಮುಸ್ತಫಾ ಸಅದಿ ಹರೇಕಳ, ನಾಸಿರ್ ಕುಕ್ಕಾಜೆ ಉಪಸ್ಥಿತರಿದ್ದರು.