ದೇರಳಕಟ್ಟೆ ಹಯಾತುಲ್ ಇಸ್ಲಾಂ ಮದ್ರಸ ಹಳೆ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ
ಮಂಗಳೂರು, ಅ.25: ದೇರಳಕಟ್ಟೆಯ ಬದ್ರಿಯಾ ಜುಮಾ ಮಸೀದಿಯ ಅಧೀನದ ಹಯಾತುಲ್ ಇಸ್ಲಾಂ ಮದ್ರಸದ ಹಳೆ ವಿದ್ಯಾರ್ಥಿ ಸಂಘದ ಮೂರನೇ ವಾರ್ಷಿಕ ಮಹಾಸಭೆ ಸಂಸ್ಥೆಯ ಕಚೇರಿಯಲ್ಲಿ ಇತ್ತೀಚೆಗೆ ನಡೆದು 2019-20ನೆ ಸಾಲಿಗೆ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಅಹ್ಮದ್ ಆರ್.ಶೇಟ್, ಅಧ್ಯಕ್ಷರಾಗಿ ಡಿ.ಎ. ಅಶ್ರಫ್,ಉಪಾಧ್ಯಕ್ಷರಾಗಿ ಕೆ.ಎಂ. ಶರೀಫ್, ಕಲಂದರ್ ಶಾಫಿ, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್, ಜೊತೆ ಕಾರ್ಯದರ್ಶಿಗಳಾದ ಇಕ್ಬಾಲ್, ಶಿಹಾಬುದ್ದೀನ್, ಕೋಶಾಧಿಕಾರಿಯಾಗಿ ನಾಸಿರ್ ಅಹ್ಮದ್, ಅಡಳಿತ ಸಮಿತಿಯ ಸದಸ್ಯರಾಗಿ ಯಾಸರ್, ಅಬ್ದುಲ್ ರಶೀದ್ ಕೆ.ಎಂ., ರಫೀಕ್, ಇಸ್ಹಾಕ್, ಹಸನ್ ಅಲಿ, ಶಕೀಲ್ ಆಯ್ಕೆಯಾದರು.
ಮಸೀದಿಯ ಮುಅದ್ಸಿನ್ ಅಯ್ಯೂಬ್ ಮುಸ್ಲಿಯಾರ್ ದುಆಗೈದರು. ಅಧ್ಯಕ್ಷ ಯಾಸರ್ ಅಧ್ಯಕ್ಷತೆ ವಹಿಸಿದ್ದರು. ಮಸೀದಿಯ ಅಧ್ಯಕ್ಷ ಅಬ್ಬಾಸ್ ಹಾಜಿ, ಮಾಜಿ ಉಪಾಧ್ಯಕ್ಷ ಅಬ್ದುಲ್ ಅಝೀಝ್, ಅನ್ಸಾರುಲ್ ಮುಸ್ಲಿಮೀನ್ ಅಧ್ಯಕ್ಷ ಇಲ್ಯಾಸ್ ಹಾಜಿ, ದೇರಳಕಟ್ಟೆ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಅಬೂಬಕ್ಕರ್ ಹಾಜಿ, ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯ ಡಿ.ಎಂ. ಮುಹಮ್ಮದ್ ಪುಷ್ಟಿ, ಬೆಳ್ಮ ಗ್ರಾಪಂ ಸದಸ್ಯ ಡಿ. ಕಬೀರ್ ಹಾಜಿ, ಮಸೀದಿಯ ಆಡಳಿತ ಸಮಿತಿಯ ಸದಸ್ಯರಾದ ಅಬ್ದುಲ್ ರಶೀದ್ ಡಿ.ಎಂ., ಖತೀಬ್ ರಿಯಾಝ್ ರಹ್ಮಾನಿ ಕಿನ್ಯ ಉಪಸ್ಥಿತರಿದ್ದರು.