ಈ ದೇಶಕ್ಕೆ ತೆರಳುವ ಭಾರತೀಯರಿಗೆ ಇನ್ನು ವೀಸಾ ಬೇಕಾಗಿಲ್ಲ!
Update: 2019-10-25 23:07 IST
ಸಾವೊ ಪೌಲೊ (ಬ್ರೆಝಿಲ್), ಅ. 25:ಬ್ರೆಝಿಲ್‌ಗೆ ಭೇಟಿ ನೀಡುವ ಭಾರತೀಯ ಮತ್ತು ಚೀನಿ ಪ್ರವಾಸಿಗರು ಅಥವಾ ಉದ್ಯಮಿಗಳು ವೀಸಾ ಪಡೆಯಬೇಕೆಂಬ ನಿಯಮವನ್ನು ಕೈಬಿಟ್ಟಿರುವುದಾಗಿ ಆ ದೇಶದ ಅಧ್ಯಕ್ಷ ಜೈರ್ ಬೊಲ್ಸೊನಾರೊ ಗುರುವಾರ ಹೇಳಿದ್ದಾರೆ.
ಈ ವರ್ಷದ ಆದಿ ಭಾಗದಲ್ಲಿ ಅಧಿಕಾರಕ್ಕೆ ಬಂದಿರುವ ರಾಜಕಾರಣಿ ಬೊಲ್ಸೊನಾರೊ, ಈಗಾಗಲೇ ಹಲವಾರು ಅಭಿವೃದ್ಧಿ ಹೊಂದಿದ ದೇಶಗಳ ಪ್ರವಾಸಿಗರಿಗೆ ವೀಸಾ ಇಲ್ಲದೆ ದೇಶ ಪ್ರವೇಶಿಸಲು ಅವಕಾಶ ನೀಡಿದ್ದಾರೆ.
ಆದರೆ, ಅಭಿವೃದ್ಧಿಶೀಲ ಜಗತ್ತಿಗೆ ಈ ಕೊಡುಗೆಯನ್ನು ಅವರು ನೀಡಿರುವುದು ಇದೇ ಮೊದಲು. ಚೀನಾ ಪ್ರವಾಸದ ವೇಳೆ ಅವರು ಈ ಘೋಷಣೆಯನ್ನು ಮಾಡಿದ್ದರೆ.
ವೀಸಾ ಇಲ್ಲದೆ ದೇಶ ಪ್ರವೇಶಿಸುವ ಸೌಲಭ್ಯವನ್ನು ಬ್ರೆಝಿಲ್ ಈಗಾಗಲೇ ಅಮೆರಿಕ, ಕೆನಡ, ಜಪಾನ್ ಮತ್ತು ಆಸ್ಟ್ರೇಲಿಯಗಳ ಪ್ರವಾಸಿಗರಿಗೆ ನೀಡಿದೆ.