ಕಲ್ಲಡ್ಕ: ಅ.30ರಂದು ಎನ್ ಆರ್ ಸಿ ಮಾಹಿತಿ ಶಿಬಿರ
Update: 2019-10-26 16:53 IST
ಬಂಟ್ವಾಳ, ಅ. 26: ಕಲ್ಲಡ್ಕ ಮುಹಿದ್ದೀನ್ ಜುಮಾ ಮಸೀದಿ ಇದರ ಸಹಕಾರದಲ್ಲಿ ಅ.30ರಂದು ಮಗ್ರಿಬ್ ನಮಾಝ್ ಬಳಿಕ ಎನ್ ಆರ್ ಸಿ ಮಾಹಿತಿ ಶಿಬಿರ ಕಲ್ಲಡ್ಕದ ಮುನೀರುಲ್ ಇಸ್ಲಾಂ ಮದ್ರಸದ ಸಭಾಂಗಣದಲ್ಲಿ ನಡೆಯಲಿದೆ. ಬಹುಭಾಷಾ ಪಂಡಿತ ಅಬ್ದುಸ್ಸಮದ್ ಪೋಕೊಟುರು ವಿಷಯ ಮಂಡನೆ ಮಾಡುವರು. ಕಲ್ಲಡ್ಕ ಮುದರ್ರಿಸ್ ಮುಹಮ್ಮದ್ ಫೈಝಿ ಅಲ್‍ಅಝ್ಹರಿ ಉಪಸ್ಥಿತರಿರುವರು. ಅಬೂಬಕರ್ ಹಾಜಿ ಅಧ್ಯಕ್ಷತೆ ವಹಿಸಲಿರುವ ಎಂದು ಕಾರ್ಯದರ್ಶಿ ಅಬ್ದುಲ್ ಹಮೀದ್ ತಿಳಿಸಿದ್ದಾರೆ.