×
Ad

ತಿರುಪತಿ ಬಾಲಾಜಿಯ ಶ್ರೀ ರಕ್ಷೆ ವಿಶ್ವವಿಖ್ಯಾತಿ : ಚಂದ್ರಶೇಖರ ಸ್ವಾಮೀಜಿ

Update: 2019-10-26 18:34 IST

ಮಂಗಳೂರು: ಧಾರ್ಮಿಕತೆಯಿಂದ ಮಾನವನ ಗುಣ ಸಂಪನ್ನತೆ ಹೆಚ್ಚುತ್ತದೆ. ತಿರುಪತಿ ಬಾಲಾಜಿಯ ಶ್ರೀ ರಕ್ಷೆಯು ವಿಶ್ವ ವಿಖ್ಯಾತಿ ಹೊಂದಿದೆ. ಪುಣ್ಯ ಕ್ಷೇತ್ರದಲ್ಲಿನ ಸಾನ್ನಿಧ್ಯ ಪ್ರಾರ್ಥನೆಯಿಂದ ನಮ್ಮಲ್ಲಿನ ಸುಖ ಶಾಂತಿ ನೆಮ್ಮದಿಯನ್ನು ಹೆಚ್ಚಿಸಿಕೊಂಡು ಸಮಾಜ ಸೇವೆಗೆ ಪೂರಕವಾಗಿ ಮನಸ್ಸನ್ನು ಕೇಂದ್ರೀಕರಿಸಬಹುದು ಇದೇ ಜೀವನದ ಸನ್ಮಾರ್ಗವಾಗಿದೆ ಎಂದು ಅಂತಾರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಹೇಳಿದ್ದಾರೆ.

ಅವರು ತಮ್ಮ ಹುಟ್ಟು ಹಬ್ಬದ ಸಂದರ್ಭ ಲಂಡನ್‌ನ ಬರ್ಮಿಂಗ್ ಹ್ಯಾಮ್‌ನ ಟಿವಿಡೇಲ್‌ನಲ್ಲಿರುವ ಶ್ರೀ ವೆಂಕಟೇಶ್ವರ ಬಾಲಾಜಿ ದೇವಸ್ಥಾನದಲ್ಲಿ ವಿಶೇಷ ದರ್ಶನ ಪಡೆದು ನಂತರ ದೇವಳದ ಸಭಾಂಗಣದಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಈ ಸಂದರ್ಭ ಚಂದ್ರಶೇಖರ ಸ್ವಾಮೀಜಿ ಹಾಗೂ ಅವರ ಪತ್ನಿ ರಜನಿ ಸಿ. ಭಟ್ ಅವರನ್ನು ದೇವಳದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಬೆಂಗಳೂರು ಹಾಗೂ ಹುಟ್ಟೂರು ಮುಲ್ಕಿಯಲ್ಲಿ ಚಂದ್ರಶೇಖರ ಸ್ವಾಮೀಜಿ ಅವರ ಸೇವಾ ಟ್ರಸ್ಟ್‌ನಿಂದ ಅವರ ಅಭಿಮಾನಿಗಳು ಹಾಗೂ ಭಕ್ತರು ಹುಟ್ಟು ಹಬ್ಬದಂದು ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಅಂತರ್ಜಾಲದ ಮೂಲಕ ನೇರವಾಗಿ ಸಭಾಂಗಣದಲ್ಲಿ ಪ್ರಸಾರ ಮಾಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದ ವಿವರವನ್ನು ಪೂಜಾ ಸಿ. ಭಟ್ ಅವರು ವಿವರಿಸಿದರು.

ಸ್ವಾಗತ ಸಮಿತಿಯ ಗೌರವಾಧ್ಯಕ್ಷೆ ಋತಿಕಾಕಿರಣ್ಮಯಿ ಮತ್ತು ವೆಂಕಟ ಸತ್ಯಸತೃಜ್ಞೇಶ್ವರ ಶ್ರೀಕಾಂತ್, ಆಡಳಿತ ಮಂಡಳಿಯ ಸದಸ್ಯರು ಹಾಗು ಲಂಡನ್‌ನ ಸ್ವಾಮೀಜಿಯ ಭಕ್ತಾರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸ್ವಾಮೀಜಿ ದಂಪತಿಗೆ ಲಂಡನ್‌ನ ಪಾರ್ಲಿಮೆಂಟ್‌ನಲ್ಲಿ ಗೌರವ ಸಲ್ಲಿಸಲಾಯಿತು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News