×
Ad

50:50 ಅಧಿಕಾರ ಹಂಚಿಕೆ ಕುರಿತಂತೆ ಬಿಜೆಪಿಯಿಂದ ಲಿಖಿತ ಭರವಸೆಗೆ ಬೇಡಿಕೆಯಿರಿಸಿದ ಉದ್ಧವ್ ಠಾಕ್ರೆ

Update: 2019-10-26 19:51 IST

ಮುಂಬೈ, ಅ.26: ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ  ಮೈತ್ರಿಕೂಟ ಮುಂದಿನ ಸರಕಾರ ರಚನೆಗೆ ಹಕ್ಕು ಮಂಡಿಸುವ ಮೊದಲು ತಮಗೆ 50:50 ಸೂತ್ರದಂತೆ ಅಧಿಕಾರ ಹಂಚಿಕೆ ಕುರಿತಂತೆ ಲಿಖಿತ ಭರವಸೆ ನೀಡಬೇಕೆಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಶನಿವಾರ ಬೇಡಿಕೆ  ಮುಂದಿರಿಸಿದ್ದಾರೆ.

ತಮ್ಮ ಮುಂದೆ ಇತರ ಆಯ್ಕೆಗಳಿದ್ದರೂ ಬಿಜೆಪಿ ಮತ್ತು ಶಿವಸೇನೆ ಹಿಂದುತ್ವ ಸಿದ್ಧಾಂತದಡಿ ಕಾರ್ಯಾಚರಿಸುತ್ತಿರುವುದರಿಂದ ಇತರ ಆಯ್ಕೆಗಳನ್ನು ಪರಿಗಣಿಸುವುದಿಲ್ಲ ಎಂದೂ ಠಾಕ್ರೆ ಹೇಳಿದ್ದಾರೆಂದು  ಅವರ ಪಕ್ಷದ ಕೆಲ ಶಾಸಕರು ಹೇಳಿದ್ದಾರೆ.

ಬಿಜೆಪಿ ಈ ಬಾರಿ ಕಳೆದ ಬಾರಿಗಿಂತ 17ರಷ್ಟು ಕಡಿಮೆ ಸ್ಥಾನ ಗಳಿಸಿರುವ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಒತ್ತಡ ತಂತ್ರಗಾರಿಕೆ ನಡೆಸುತ್ತಿದ್ದಾರೆಂದು ನಂಬಲಾಗಿದೆ. ಬಿಜೆಪಿ ಈ ಬಾರಿ 105 ಸ್ಥಾನ ಗಳಿಸಿದ್ದರೆ ಕಳೆದ ಬಾರಿ 63 ಸ್ಥಾನ ಗಳಿಸಿದ್ದ ಶಿವಸೇನೆ  ಈ ಬಾರಿ 56 ಸ್ಥಾನಗಳನ್ನು ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News