ಜ.ಬಿಪಿನ್ ರಾವತ್‌ರಿಂದ ಯುದ್ಧಕ್ಕೆ ಪ್ರಚೋದನೆ: ಪಾಕ್ ಸೇನೆ ಆರೋಪ

Update: 2019-10-26 16:33 GMT

ಇಸ್ಲಾಮಾಬಾದ್,ಅ.26: ಪಾಕ್ ಆಕ್ರಮಿತ ಕಾಶ್ಮೀರವು ಭಯೋತ್ಪಾದಕರ ನಿಯಂತ್ರಣದಲ್ಲಿರುವ ಪಾಕಿಸ್ತಾನದ ಒಂದು ಭಾಗವೆಂಬ ಭಾರತೀಯ ಸೇನಾ ವರಿಷ್ಠ ಜನರಲ್ ಬಿಪಿನ್ ರಾವತ್ ಅವರ ಹೇಳಿಕೆಗೆ ಪಾಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜನರಲ್ ಬಿಪಿನ್ ರಾವತ್ ಅವರು ತನ್ನ ಬೇಜವಾಬ್ದಾರಿಯುತ ಹೇಳಿಕೆಗಳ ಮೂಲಕ ಯುದ್ಧವನ್ನು ಪ್ರಚೋದಿಸುತ್ತಿದ್ದಾರೆ ಹಾಗೂ ಪ್ರಾದೇಶಿಕ ಶಾಂತಿಗೆ ಧಕ್ಕೆ ತರುತ್ತಿದ್ದಾರೆಂದು ಆರೋಪಿಸಿದ್ದಾರೆ.

ರಕ್ಷಣಾ ಪಡೆಗಳ ವರಿಷ್ಠ ಹುದ್ದೆಗೆ ತನ್ನ ಅಭ್ಯರ್ಥನವನ್ನು ಬಲಪಡಿಸುವುದಕ್ಕಾಗಿ ಭಾರತೀಯ ಭೂಸೇನಾ ವರಿಷ್ಠರು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆಂದು ಪಾಕ್ ಸೇನಾ ವಕ್ತಾರ ಮೇಜರ್ ಜನರಲ್ ಅಸಿಫ್ ಗಫೂರ್ ಆರೋಪಿಸಿದ್ದಾರೆ.

 ಹೊಸದಿಲ್ಲಿಯಲ್ಲಿ ಶುಕ್ರವಾರ ನಡೆದ ಫೀಲ್ಡ್‌ಮಾರ್ಷಲ್ ಕೆ.ಎಂ.ಕಾರಿಯಪ್ಪ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ರಾವತ್ ಅವರು, ಗಿಲ್ಗಿಟ್-ಬಾಲ್ಟಿಸ್ತಾನ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಗಳನ್ನು ಪಾಕಿಸ್ತಾನವು ಅಕ್ರಮವಾಗಿ ಸ್ವಾಧೀನದಲ್ಲಿರಿಸಿಕೊಂಡಿದೆಯೆಂದು ಆಪಾದಿಸಿದ್ದರು.

‘‘ಪಾಕಿಸ್ತಾನವು ಆಕ್ರಮಿಸಿಕೊಂಡಿರುವ ಪ್ರಾಂತ (ಪಿಓಕೆ)ವನ್ನು ಪಾಕ್ ಆಡಳಿತ ನಿಯಂತ್ರಣದಲ್ಲಿರಿಸಿಕೊಂಡಿಲ್ಲ. ಅದನ್ನು ಭಯೋತ್ಪಾದಕರು ನಿಯಂತ್ರಿಸುತ್ತಿದ್ದಾರೆ. ವಾಸ್ತವವಾಗಿ ಪಿಓಕೆ, ಭಯೋತ್ಪಾದಕರ ನಿಯಂತ್ರಣದಲ್ಲಿರುವ ಪ್ರಾಂತವಾಗಿ ೆಯೆಂದು ಭಾರತೀಯ ಸೇನಾ ವರಿಷ್ಠರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News