ಮಹಾರಾಷ್ಟ್ರ: ಅತಿದೊಡ್ಡ ವಂಶರಾಜಕಾರಣ ಪಕ್ಷವಾದ ಬಿಜೆಪಿ

Update: 2019-10-26 18:08 GMT

ಹೊಸದಿಲ್ಲಿ, ಅ. 26: ರಾಜಕೀಯ ಕುಟುಂಬಕ್ಕೆ ಸೇರಿದ 16ಕ್ಕೂ ಅಧಿಕ ಶಾಸಕರು ಮಹಾರಾಷ್ಟ್ರ ವಿಧಾನ ಸಭೆ ಪ್ರವೇಶಿಸುವ ಮೂಲಕ ಬಿಜೆಪಿ ಮಹಾರಾಷ್ಟ್ರದಲ್ಲಿ ಅತಿ ದೊಡ್ಡ ವಂಶ ರಾಜಕಾರಣದ ಪಕ್ಷವಾಗಿ ಹೊರ ಹೊಮ್ಮಿದೆ.

ಮಹಾರಾಷ್ಟ್ರ ಹಾಗೂ ಹರ್ಯಾಣ ಚುನಾವಣೆಯಲ್ಲಿ ರಾಜಕೀಯ ಕುಟುಂಬದ ಯಶಸ್ಸು ಕಂಡ ಅಭ್ಯರ್ಥಿಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಅತ್ಯಧಿಕ.

ವಂಶ ರಾಜಕಾರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರ ಅಮಿತ್ ಶಾ ವಿಪಕ್ಷವನ್ನು ನಿರಂತರ ಟೀಕಿಸುತ್ತಿರುವ ನಡುವೆಯೇ ಬಿಜೆಪಿಯ ವಂಶ ರಾಜಕಾರಣ ಯಶಸ್ವಿಯಾಗಿದೆ.

ಸೋಮವಾರ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ರಾಜಕೀಯ ಕುಟುಂಬಕ್ಕೆ ಸೇರಿದ ಬಿಜೆಪಿಯ 91 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇವರಲ್ಲಿ 54 ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಇದು ಶೇ. 59.3.

ಹರ್ಯಾಣದಲ್ಲಿ ರಾಜಕೀಯ ಕುಟುಂಬಕ್ಕೆ ಸೇರಿದ 22 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಹಾಗೂ 12 ಮಂದಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ರಾಜಕೀಯ ಕುಟುಂಬಕ್ಕೆ ಸೇರಿದ 42 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಹಾಗೂ 69 ಮಂದಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.

  ಗುರುವಾರ ನಡೆದ ಚುನಾವಣೆಯಲ್ಲಿ ಹರ್ಯಾಣದ ಲಾಲ್‌ಗಳಿಂದ ಹಿಡಿದು ಮಹಾರಾಷ್ಟ್ರದ ಠಾಕ್ರೆ ವರೆಗೆ ಎರಡೂ ರಾಜ್ಯಗಳಲ್ಲಿ ರಾಜಕೀಯ ಕುಟುಂಬದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

 228 ಸದಸ್ಯರುಳ್ಳ ಮಹಾರಾಷ್ಟ್ರ ವಿಧಾನ ಸಭೆಯ ಶಿವಸೇನೆ 124 ಕ್ಷೇತ್ರಗಳಲ್ಲಿ ಸ್ಫರ್ದಿಸಿತ್ತು. ಇವರಲ್ಲಿ 13 ಮಂದಿ ರಾಜಕೀಯ ಕುಟುಂಬಕ್ಕೆ ಸೇರಿದ ಅಭ್ಯರ್ಥಿಗಳು. ಈ ರಾಜಕೀಯ ಕುಟುಂಬಕ್ಕೆ ಸೇರಿದ ಅಭ್ಯರ್ಥಿಗಳಲ್ಲಿ ಐವರು ಜಯ ಗಳಿಸಿದ್ದಾರೆ.

ಮಹಾರಾಷ್ಟ್ರದ ಬಿಜೆಪಿ ಇತರ ಮಿತ್ರ ಪಕ್ಷಗಳೊಂದಿಗೆ ಸೇರಿ 64 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಶೇ. 16 ರಾಜಕೀಯ ಕುಟುಂಬದ ಅಭ್ಯರ್ಥಿಗಳು (27) ಸ್ಪರ್ಧಿಸಿದ್ದರು. ಬಿಜೆಪಿ ಈ ಹಿಂದೆ ರಾಜಕೀಯ ಕುಟುಂಬಕ್ಕೆ ಸೇರಿದ 28 ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಉದ್ದೇಶ ಹೊಂದಿತ್ತು. ಆದರೆ, ಬಿಜೆಪಿ ನಾಯಕ ಗಣೇಶ್ ನಾಯಕ್ ಬದಲು ಅವರ ಪುತ್ರ ಸ್ಪರ್ಧಿಸುವುದರಿಂದ ಅದು 27ಕ್ಕೆ ಇಳಿದಿತ್ತು.

ಹರ್ಯಾಣದಲ್ಲಿ ಬಿಜೆಪಿ ರಾಜಕೀಯ ಕುಟುಂಬಕ್ಕೆ ಸೇರಿದ ಕೇವಲ ಇಬ್ಬರು ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಿದೆ. ಅವರಲ್ಲಿ ಆದಿತ್ಯ ಚೌಟಾಲ ಜಯ ಗಳಿಸಿದ್ದಾರೆ. ಆದರೆ, ಕೇಂದ್ರದ ಮಾಜಿ ಸಚಿವ ಬಿರೇಂದರ್ ಸಿಂಗ್ ಅವರ ಪತ್ನಿ ಪ್ರೇಮ್ ಲತಾ ಸೋತಿದ್ದಾರೆ.

 ಹರ್ಯಾಣದಲ್ಲಿ ಕಾಂಗ್ರೆಸ್ ರಾಜಕೀಯ ಕುಟುಂಬಕ್ಕೆ ಸೇರಿದ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇವರಲ್ಲಿ ಪಕ್ಷದ ಹಿರಿಯ ನಾಯಕ ಭೂಪಿಂದರ್ ಸಿಂಗ್ ಹೂಡ ಹಾಗೂ ಕಿರಣ್ ಚೌಧರಿ ಸೇರಿದಂತೆ 7 ಮಂದಿ ಜಯ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News