×
Ad

ಪ.ಪೂ. ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ: ಆಳ್ವಾಸ್ ಪ.ಪೂ. ಕಾಲೇಜಿಗೆ 32 ಪದಕ

Update: 2019-10-26 22:26 IST

ಮೂಡುಬಿದಿರೆ: ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ, ಶಿವಮೊಗ್ಗ ಹಾಗೂ ಡಿ.ಎಸ್.ಪದವಿ ಪೂರ್ವಕಾಲೇಜ್ ಶಿವಮೊಗ್ಗ ಇವರಆಶ್ರಯದಲ್ಲಿ ನವೆಂಬರ್ 23, ರಿಂದ 25, 2019ರವರೆಗೆ ನಡೆದ ಪದವಿಪೂರ್ವ ಕಾಲೇಜ್‍ಗಳ ಅಥ್ಲೆಟಿಕ್ಸ್‍ಕ್ರೀಡಾಕೂಟದಲ್ಲಿ ಆಳ್ವಾಸ್ ಪದವಿ ಪೂರ್ವಕಾಲೇಜ್  12 ಚಿನ್ನದ ಪದಕ, 12ಬೆಳ್ಳಿ ಪದಕ ಮತ್ತು 08ಕಂಚಿನ ಪದಕ ಪಡೆಯಿತು. ಹಾಗೂ ರಾಷ್ಟ್ರೀಯಕ್ರೀಡಾಕೂಟಕ್ಕೆ 20 ಕ್ರೀಡಾಪಟುಗಳ ಆಯ್ಕೆಯಾಗಿದ್ದಾರೆ.

ಬಾಲಕರ ವಿಭಾಗದಲ್ಲಿ ಆಳ್ವಾಸ್ ಪ.ಪೂ. ಕಾಲೇಜಿನ ನಾಗೇಂದ್ರಅಣಪ್ಪ ಗುಂಡುಎಸೆತ ಪ್ರಥಮ, ಚಕ್ರ ಎಸೆತ ದ್ವಿತೀಯ, ಮಹತೇಶ್ 400ಮೀ ಪ್ರಥಮ, 200ಮೀ. ದ್ವಿತೀಯ, ಮುತ್ತಪ್ಪ ಹ್ಯಾಮರ್‍ಎಸೆತ ಪ್ರಥಮ, ದಿಶ್ಸತ್ 110ಮೀ ಹರ್ಡಲ್ಸ್ ಪ್ರಥಮ, ಗೋಪಾಲಕೃಷ್ಣ ಪ್ರಶಾಂತ್‍ ಪೋಲ್‍ವಾಲ್ಟ್ ಪ್ರಥಮ, ದೇವರಾಜ್ 5ಕೀ.ಮೀ.ನಡಿಗೆ ಪ್ರಥಮ, ಸತೀಶ್ 1500, 3000ದ್ವಿತೀಯ, ಸುದೀಪ್ ಹ್ಯಾಮರ್‍ತ್ರೋ ದ್ವಿತೀಯ, ರೋಹಿತ್‍ನಾಯಕ್ ತ್ರಿವಿಧಜಿಗಿತ ತೃತೀಯ, 4x100ಮೀ.ದ್ವಿತೀಯ ಸ್ಥಾನ ಪಡೆದಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಐಶ್ವರ್ಯ ಉದ್ದಜಿಗಿತ ಪ್ರಥಮ, ಯಶ್ಮಿನ್ ತ್ರಿವಿಧಜಿಗಿತ ಪ್ರಥಮ, ಧನುಷ ಶೆಟ್ಟಿ 3ಕೀ.ಮೀ. ನಡಿಗೆ ಪ್ರಥಮ, ದೀಪಾ ಶ್ರೀ 800ಮೀ.ಪ್ರಥಮ, ಮಾಲಾಶ್ರೀ ಗುಡ್ಡಗಾಡು ಓಟ ಪ್ರಥಮ, 3000ದ್ವಿತೀಯ, ಚೈತ್ರಾ 800ಮೀ, ಗುಡ್ಡಗಾಡು ಓಟ ದ್ವಿತೀಯ, 300ಮೀ.ತೃತೀಯ, ಕೀರ್ತಿಶೆಟ್ಟಿ ತ್ರಿವಿಧಜಿಗಿತ ದ್ವಿತೀಯ, ಪ್ರಜ್ಞಾ ಗುಡ್ಡಗಾಡು ಓಟ 4ನೇಸ್ಥಾನ, ಚಿಕ್ಕಮ್ಮ ಗುಡ್ಡಗಾಡುಓಟ 5ನೇಸ್ಥಾನ, ಕಾವ್ಯಗುಡ್ಡಗಾಡು ಓಟ 6ನೇಸ್ಥಾನ, ಪಲ್ಲವಿ ಪಟೀಲ್‍ಎತ್ತರಜಿಗಿತ ದ್ವಿತೀಯ, ಶ್ವೇತಾ ಪೋಲ್‍ವ್ಟಾಲ್‍ತೃತೀಯ, ಸೇಹ್ನ ಉದ್ದ ಜಿಗಿತ ತೃತೀಯ, ಸುಷ್ಮಾ ಚಕ್ರ ಎಸೆತ ತೃತೀಯ, 4x400 ರಿಲೇ ಪ್ರಥಮ, 4x100 ರಿಲೇ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಹಾಗೂ ಪ್ರಾಂಶುಪಾಲ ರಮೇಶ್ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News