ಹೃದಯಾಘಾತ: ಗುರುವಾಯನಕೆರೆ ನಿವಾಸಿ ಮಕ್ಕಾದಲ್ಲಿ ನಿಧನ
Update: 2019-10-26 22:59 IST
ಬೆಳ್ತಂಗಡಿ: ಕುವೆಟ್ಟು ಗ್ರಾ.ಪಂ. ವ್ಯಾಪ್ತಿಯ ಪಿಲಿಚಂಡಿಕಲ್ಲು (ಸುನ್ನತ್ ಕೆರೆ) ನಿವಾಸಿ ಅಬ್ದುಲ್ ಖಾದರ್ ಯಾನೆ ಪುತ್ತುಮೋನು ಹಾಜಿ (55) ಅವರು ಹೃದಯಾಘಾತದಿಂದ ಸೌದಿ ಅರೇಬಿಯಾದ ಮಕ್ಕಾದಲ್ಲಿ ಅ. 24 ರಂದು ರಾತ್ರಿ ನಿಧನರಾಗಿದ್ದಾರೆ.
ಅವರ ಅಂತ್ಯ ಸಂಸ್ಕಾರ ವಿಧಿಗಳು ಅ.26ರಂದು ಮೆಕ್ಕಾದ ಜನ್ನತುಲ್ ಮಹಲ್ಲಾ ಹರಾಮ್ ಶರೀಫ್ ನಲ್ಲಿ ನಡೆದಿದೆ.
ಹಲವು ವರ್ಷಗಳಿಂದ ಅವರು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡಿಕೊಂಡಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.