×
Ad

ಐಎನ್ ಎಕ್ಸ್ ಮೀಡಿಯಾ ಹಗರಣ: ಕರ್ನಾಟಕದ ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥ ಅನೂಪ್ ಕೆ ಪೂಜಾರಿ ರಾಜೀನಾಮೆ

Update: 2019-10-27 11:09 IST

ಹೊಸದಿಲ್ಲಿ, ಅ.27: ಐಎನ್ ಎಕ್ಸ್ ಮೀಡಿಯಾ ಹಗರಣದಲ್ಲಿ ತಮ್ಮ ವಿರುದ್ಧ ಸಿಬಿಐ ಜಾರ್ಜ್ ಶೀಟ್ ಸಲ್ಲಿಸಿದ ಬೆನ್ನಲ್ಲೆ ಕರ್ನಾಟಕದ ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ ಚೇರ್ಮೆನ್   ಅನೂಪ್ ಕೆ ಪೂಜಾರಿ  ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 

ಅನೂಪ್ ಕೆ ಪೂಜಾರಿ ಈ ಹಿಂದೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಜನವರಿ 2016ರಲ್ಲಿ ನಿವೃತ್ತರಾಗಿದ್ದರು.

ತನ್ನ ವಿರುದ್ಧ ಸಿಬಿಐ ಜಾರ್ಜ್ ಶೀಟ್ ಸಲ್ಲಿಸಿದ ವಿಚಾರ ಮಾಧ್ಯಮಗಳ ಮೂಲಕ ಗೊತ್ತಾಯಿತು. ಈ ಕಾರಣದಿಂದಾಗಿ ತಾನು ರಾಜೀನಾಮೆ ನೀಡಿರುವುದಾಗಿ ಅನೂಪ್ ಕೆ ಪೂಜಾರಿ ತಿಳಿಸಿದ್ದಾರೆ.

ಅನೂಪ್ ಕೆ ಪೂಜಾರಿ , ನೀತಿ ಅಯೋಗದ ಮಾಜಿ ಸಿಇಒ ಸಿಂಧುಶ್ರೀ ಖುಲ್ಲಾರ್ ಸೇರಿದಂತೆ ಆರು ಮಂದಿ ಅಧಿಕಾರಿಗಳ ವಿರುದ್ಧ ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News