ಮನಪಾ ಚುನಾವಣೆ: ಅ.29ರಂದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಲಹಾ ಸಭೆ
Update: 2019-10-27 11:32 IST
ಮಂಗಳೂರು, ಅ.27: ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಸಿದ್ಧತೆಯ ಕುರಿತು ನಾಗರಿಕರ ಸಲಹಾ ಸಭೆಯು ಅ.29ರಂದು ಸಂಜೆ 4 ಗಂಟೆಗೆ ಮಲ್ಲಿಕಟ್ಟೆಯಲ್ಲಿರುವ ಲಯನ್ಸ್ ಕ್ಲಬ್ ಸಭಾ ಭವನದಲ್ಲಿ ನಡೆಯಲಿದೆ.
ಮಹಾನಗರ ಪಾಲಿಕೆಯ ಅಭಿವೃದ್ಧಿಯ ದೃಷ್ಟಿಯಿಂದ ನಾಗರಿಕರಿಂದ ಸಲಹೆ ಪಡೆದು ಪ್ರಣಾಳಿಕೆ ರಚಿಸಲು ಈ ಸಭೆಯನ್ನು ಆಯೋಜಿಸಲಾಗಿದೆ. ನಾಗರಿಕರು ಸಲಹೆಗಳನ್ನು ನೀಡಿ ಸಹಕರಿಸಬೇಕು ಎಂದು ಪ್ರಣಾಳಿಕೆ ಸಮಿತಿಯ ಸಂಚಾಲಕ ಜೆ.ಆರ್. ಲೋಬೋ ಮನವಿ ಮಾಡಿದ್ದಾರೆ.