×
Ad

ಅಲ್-ಖಾದಿಸ ಫ್ಯಾಮಿಲಿ ಮುಲಾಖಾತ್ :‌ ಬಡವರಿಗೆ 200ರಷ್ಟು ಮನೆ ನಿರ್ಮಾಣ ಘೋಷಣೆ

Update: 2019-10-27 12:45 IST

ಮಂಗಳೂರು: ಅಲ್ ಖಾದಿಸ ಎಜುಕೇಶನಲ್ ಅಕಾಡೆಮಿ ಕಾವಳಕಟ್ಟೆ ಇದರ ರಿಯಾದ್ ಸಮಿತಿ ವತಿಯಿಂದ ಫ್ಯಾಮಿಲಿ ಮುಲಾಖಾತ್ ರಿಯಾದಿನ ಎಕ್ಸಿಟ್  16 ತ್ವಾಖತ್ ಇಸ್ತಿರಾದಲ್ಲಿ ಶುಕ್ರವಾರ ನಡೆಯಿತು. ಇಸ್ಮಾಯಿಲ್ ಕಣ್ಣಂಗಾರ್ ಸಭಾಧ್ಯಕ್ಷತೆ ವಹಿಸಿದ್ದ, ಕಾರ್ಯಕ್ರಮವನ್ನು ರಿಯಾದ್ ಕೆಸಿಎಫ್ ಝೋನ್ ಅಧ್ಯಕ್ಷ ಫಾರೂಕ್ ಸಅದಿ ಉದ್ಘಾಟಿಸಿದರು.

ಅಲ್ ಖಾದಿಸ ಎಜುಕೇಶನ್ ಅಕಾಡೆಮಿ ಕಾವಳಕಟ್ಟೆ ಇದರ ಸಾರಥಿ ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ಅವರು ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ 30ಎಕರೆ ವಿಸ್ತೀರ್ಣ ಜಾಗದಲ್ಲಿ ತಲೆ ಎತ್ತಿ ನಿಂತ ಸಂಸ್ಥೆಯ ರೂಪುರೇಷೆಯ ಬಗ್ಗೆ ವಿವರಿಸಿದರು. ರಾಜ್ಯದ ಸುಮಾರು22 ಜಿಲ್ಲೆಗಳಿಂದ ನೂರಾರು ಮಕ್ಕಳು ಉಚಿತವಾಗಿ ಧಾರ್ಮಿಕ ಲೌಖಿಕ ವಿಧ್ಯಾಭ್ಯಾಸವನ್ನು ಇಲ್ಲಿ ಪಡೆಯುತ್ತಿದ್ದು, ಝಹ್ರತುಲ್ ಖುರಾನ್ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ ಯಲ್ಲಿ 470 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಸರಕಾರಿ ಉರ್ದು ಶಾಲೆಯನ್ನು ಸಂಸ್ಥೆಯು ದತ್ತು ಪಡೆದು ಮುನ್ನೆಡಿಸುತ್ತಿದೆ. ಇನ್ನು 200 ಬಡ ಕುಟುಂಬ ಗಳಿಗೆ ವಸತಿ ಸೌಲಭ್ಯ ಹಾಗೂ ಅಂಗವಿಕ ಮತ್ತು ಬುದ್ದಿಮಾಂದ್ಯ ಮಕ್ಕಳ ಪೋಷಣಾ ಕೇಂದ್ರ ಹಾಗೂ ಮಹಿಳಾ ಶರೀಯತ್ ಕೇಂದ್ರ ಶೀಘ್ರದಲ್ಲಿಯೇ ನಿರ್ಮಾಣ ವಾಗಲಿದೆ ಎಂದರು.

ಪೆರೋಡ್ ಮುಹಮ್ಮದ್ ಅಝ್ಹರಿ ಮುಖ್ಯ ಪ್ರಭಾಷಣ ಮಾಡಿದರು. ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಕಮಿಟಿ ಅಧ್ಯಕ್ಷ ಯೂಸುಫ್ ಸಖಾಫಿ ಬೈತಾರ್ ಆಶಂಸ ಭಾಷಣ ಮಾಡಿದರು. ಇದೇ ವೇಳೆ ಸಮಿತಿ ವತಿಯಿಂದ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು. 

 ಸಭಾ ಕಾರ್ಯಕ್ರಮದ ಮೊದಲು ಮುಸ್ತಫಾ ಸಅದಿ,  ರಶೀದ್ ಮದನಿಯವರ ನೇತೃತ್ವದಲ್ಲಿ ಮಕ್ಕಳ ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅಮಾನ್ ಕಾಟಿಪಳ್ಳ ಅವರ ನೇತೃತ್ವದಲ್ಲಿ ಇಲಲ್ ಹಬೀಬ್ ಇಶಲ್ ನೈಟ್ ನಡೆಯಿತು.

ವೇದಿಕೆಯಲ್ಲಿ ರೈಸ್ಕೋ ಅಬೂಬಕ್ಕರ್ ಹಾಜಿ ಪಡುಬಿದ್ರೆ, ಮುಹಮ್ಮದಾಲಿ ಗುರುಪುರ, ಅಬೂಬಕ್ಕರ್ ಸಾಲೆತ್ತೂರು ಮತ್ತಿತರರು ಉಪಸ್ಥಿತರಿ ದ್ದರು. ಬಶೀರ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು. ಸಿದ್ದೀಕ್ ನಿಝಾಮಿ ಧನ್ಯವಾದ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News