ಅಯೋಧ್ಯೆ ಕುರಿತ ತೀರ್ಪನ್ನು ಎಲ್ಲರೂ ಹೃತ್ಪೂರ್ವಕವಾಗಿ ಸ್ವೀಕರಿಸಬೇಕು: ಆರೆಸ್ಸೆಸ್

Update: 2019-10-30 16:26 GMT
ಸುಪ್ರೀಂಕೋರ್ಟ್

ಹೊಸದಿಲ್ಲಿ, ಅ.30: ಅಯೋಧ್ಯೆ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಎಲ್ಲರೂ ಹೃತ್ಪೂರ್ವಕವಾಗಿ ಸ್ವೀಕರಿಸಬೇಕು. ಯಾವುದೇ ತೀರ್ಪು ಬರಲಿ, ದೇಶದಲ್ಲಿ ಸೌಹಾರ್ದತೆಯ ವಾತಾವರಣ ಖಾತರಿಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಆರೆಸ್ಸೆಸ್ ಹೇಳಿದೆ.

ಸಿಜೆಐ(ಮುಖ್ಯ ನ್ಯಾಯಾಧೀಶರು) ನಿವೃತ್ತರಾಗಲಿರುವ ನವೆಂಬರ್ 17ರ ಮೊದಲು ಅಯೋಧ್ಯೆ ಕುರಿತ ತೀರ್ಪು ಹೊರಬೀಳುವ ನಿರೀಕ್ಷೆಯಿದೆ. ತೀರ್ಪು ಹೊರಬಿದ್ದ ಬಳಿಕ ಉದ್ಭವಿಸುವ ಸಮಸ್ಯೆಗಳ ಬಗ್ಗೆ ಹೊಸದಿಲ್ಲಿಯಲ್ಲಿ ನಡೆಯಲಿರುವ ಆರೆಸ್ಸೆಸ್ ಹಿರಿಯ ಕಾರ್ಯಕರ್ತರ ಎರಡು ದಿನಗಳ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಆರೆಸ್ಸೆಸ್‌ನ ಪ್ರಚಾರ ವಿಭಾಗದ ಮುಖ್ಯಸ್ಥ ಅರುಣ್ ಕುಮಾರ್ ಹೇಳಿದ್ದಾರೆ. ಈ ಮಧ್ಯೆ, ಹರಿದ್ವಾರದಲ್ಲಿ ಅಕ್ಟೋಬರ್ 31ರಿಂದ ನವೆಂಬರ್ 4ರವರೆಗೆ ನಡೆಯಬೇಕಿದ್ದ ಆರೆಸ್ಸೆಸ್ ಸಮಾವೇಶವನ್ನು ಮುಂದೂಡಲಾಗಿದೆ ಎಂದು ಆರೆಸ್ಸೆಸ್ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News