×
Ad

ಅ.31: ಸಿಂಡ್ ಬ್ಯಾಂಕ್ ಸ್ಥಾಪಕರ ದಿನಾಚರಣೆ

Update: 2019-10-30 23:13 IST

ಉಡುಪಿ, ಅ.30: ಸಿಂಡಿಕೇಟ್ ಬ್ಯಾಂಕಿನ 94ನೇ ಸ್ಥಾಪಕರ ದಿನಾಚರಣೆಯನ್ನು ಸಿಂಡಿಕೇಟ್ ಬ್ಯಾಂಕ್ ವಲಯ ಕಚೇರಿ ಮಣಿಪಾಲ ಹಾಗೂ ಪ್ರಾದೇಶಿಕ ಕಚೇರಿ ಉಡುಪಿ ಇವುಗಳ ಜಂಟಿ ಆಶ್ರಯದಲ್ಲಿ ಅ.31ರ ಗುರುವಾರ ಸಂಜೆ 4:00 ಗಂಟೆಗೆ ಉಡುಪಿಯ ಸಿಂಡಿಕೇಟ್ ಟವರ್‌ನಲ್ಲಿರುವ ಬ್ಯಾಂಕಿನಲ್ಲಿ ಆಚರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಾಕಥಾನ್: ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ವಲಯ ಕಚೇರಿ ಹಾಗೂ ಉಡುಪಿ ಪ್ರಾದೇಶಿಕ ಕಚೇರಿಗಳ ವತಿಯಿಂದ ನಡೆದಿರುವ ಜಾಗೃತಿ ಸಪ್ತಾಹದ ಅಂಗವಾಗಿ ನಾಳೆ ವಾಕಥಾನ್ ನಡೆಯಲಿದೆ. ಇದು ಬೆಳಗ್ಗೆ 9:30ಕ್ಕೆ ಉಡುಪಿ ಸಿಂಡಿಕೇಟ್ ಬ್ಯಾಂಕಿನಿಂದ ಪ್ರಾರಂಭಗೊಳ್ಳಲಿದೆ. ಸಾರ್ವಜನಿಕರು ಇದರಲ್ಲಿ ಪಾಲ್ಗೊಳ್ಳುವಂತೆ ಬ್ಯಾಂಕಿನ ಜಿಎಂ ಭಾಸ್ಕರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News