ಮಂಗಳೂರು: ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ್ದ ಐವರ ರಕ್ಷಣೆ; ಇಬ್ಬರು ಪಿಂಪ್ ಗಳ ಬಂಧನ

Update: 2019-10-31 14:41 GMT
ವಾಲಿದ್ ಖಾನ್, ಇಸ್ತಿಕಾರ್

ಮಂಗಳೂರು, ಅ.31: ನಗರದ ಕಂಕನಾಡಿಯ ಎಂಪೋರಿಯಂ ವಾಣಿಜ್ಯ ಸಂಕೀರ್ಣದಲ್ಲಿರುವ ಎಂಬಲ್ಲಿಸ್ ಸೆಲೂನ್ ಮತ್ತು ಸ್ಪಾ ಎಂಬ ಹೆಸರಿನಲ್ಲಿ ನಡೆಯುತಿದ್ದ ವೇಶ್ಯಾವಾಟಿಕೆ ಜಾಲವನ್ನು ಕದ್ರಿ ಪೊಲೀಸರು ಗುರುವಾರ ಪತ್ತೆ ಹಚ್ಚಿದ್ದಾರೆ. ಈ ಜಾಲದಲ್ಲಿ ಸಿಲುಕಿದ್ದ ಐವರು ಯುವತಿಯರನ್ನು ರಕ್ಷಿಸಲಾಗಿದೆ.

ಪಿಂಪ್‌ಗಳಾದ ಮಂಗಳಾದೇವಿಯ ವಾಲಿದ್ ಖಾನ್ ಮತ್ತು ಉತ್ತರ ಪ್ರದೇಶದ ಇಸ್ತಿಕಾರ್ ಎಂಬವರನ್ನು ಬಂಧಿಸಲಾಗಿದೆ. ಪಿಂಪ್ ವಿನೋದಾ ಎಂಬಾಕೆ ತಲೆಮರೆಸಿಕೊಂಡಿದ್ದಾಳೆ. ಆರೋಪಿಗಳ ವಿರುದ್ಧ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಹಿಳಾ ಪಿಂಪ್ ವಿರುದ್ಧ ಈ ಹಿಂದೆಯೂ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಕಾರ್ಯಾಚರಣೆಯಲ್ಲಿ ಕದ್ರಿ ಇನ್‌ಸ್ಪೆಕ್ಟರ್ ಶಾಂತಾರಾಮ, ಎಸ್ಸೈ ಮಾರುತಿ ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News