ಚಿದಂಬರಂ ಆರೋಗ್ಯ ಪರಿಸ್ಥಿತಿ ಬಗ್ಗೆ ಅಭಿಪ್ರಾಯ ನೀಡಲು ಏಮ್ಸ್‌ಗೆ ನಿರ್ದೇಶ

Update: 2019-10-31 14:47 GMT

 ಹೊಸದಿಲ್ಲಿ, ಅ. 31: ಕಾಯಿಲೆಯಿಂದ ಬಳಲುತ್ತಿರುವ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಆರೋಗ್ಯದ ಕುರಿತು ಅಭಿಪ್ರಾಯ ನೀಡಲು ಇಂದೇ ವೈದ್ಯಕೀಯ ಮಂಡಳಿ ಸ್ಥಾಪಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯ ಏಮ್ಸ್‌ನ ನಿರ್ದೇಶಕರಿಗೆ ಸೂಚಿಸಿದೆ.

 ಪ್ರಸ್ತುತ ತಿಹಾರ್ ಜೈಲಿನಲ್ಲಿ ಇರುವ ಚಿದಂಬರಂ ಅವರ ವೈದ್ಯಕೀಯ ಪರಿಸ್ಥಿತಿಯ ಕುರಿತು ಅಭಿಪ್ರಾಯ ನೀಡಲು ಮಂಡಳಿಯಲ್ಲಿ ಹೈದರಾಬಾದ್ ಮೂಲದ ಗ್ಯಾಸ್ಟ್ರೋಎಂಟೆರಾ ಲಜಿಸ್ಟ್ ನಾಗೇಶ್ವರ ರೆಡ್ಡಿ ಅವರನ್ನು ಒಳಗೊಳಿಸಬೇಕು ಎಂದು ಉಚ್ಚ ನ್ಯಾಯಾಲಯ ಹೇಳಿದೆ.

 ಐಎನ್‌ಎಕ್ಸ್ ಮೀಡಿಯಾ ಪ್ರಕರಣದ ಆರೋಪಿಯಾಗಿರುವ ಚಿದಂಬರಂ ವೈದ್ಯಕೀಯ ನೆಲೆಯಲ್ಲಿ ಮಧ್ಯಂತರ ಜಾಮೀನು ಕೋರಿದ್ದಾರೆ. ತನ್ನ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದೆ ಎಂದು ಅವರು ಮನವಿಯಲ್ಲಿ ಹೇಳಿದ್ದಾರೆ.

 ಚಿದಂಬರಂ ಅವರ ವೈದ್ಯಕೀಯ ಪರಿಸ್ಥಿತಿ ಬಗ್ಗೆ ಮಂಡಳಿ ಇಂದು ಚರ್ಚೆ ನಡೆಸಿದೆ. ಶುಕ್ರವಾರ ವಿಚಾರಣೆ ನಡೆಯುವುದಕ್ಕಿಂತ ಮುನ್ನ ಮಂಡಳಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ ಎಂದು ನ್ಯಾಯಮೂರ್ತಿ ಸುರೇಶ್ ಕೈಟ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News