×
Ad

​ಡಿಕೆಎಂಒ ರಿಯಾದ್ ಘಟಕದಿಂದ ‘ನಂಡೆ ಪೆಂಙಳ್’ ಅಭಿಯಾನಕ್ಕೆ ಧನಸಹಾಯ

Update: 2019-10-31 20:24 IST

ಮಂಗಳೂರು, ಅ.31: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಪ್ರವರ್ತಿತ ‘ನಂಡೆ ಪೆಂಙಳ್’ ಅಭಿಯಾನಕ್ಕೆ ಅನಿವಾಸಿ ಭಾರತೀಯ ಸಂಘಟನೆ ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ (ಡಿಕೆಎಂಒ) ರಿಯಾದ್ ಘಟಕದ ವತಿಯಿಂದ ಇತ್ತೀಚೆಗೆ ಟ್ಯಾಲೆಂಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 2 ಲಕ್ಷ ರೂ. ಮೊತ್ತದ ಚೆಕ್ಕನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭ ಡಿಕೆಎಂಒ ರಿಯಾದ್ ಘಟಕದ ಮಾಜಿ ಅಧ್ಯಕ್ಷ ಅಬ್ಬಾಸ್ ಉಚ್ಚಿಲ, ಸದಸ್ಯರಾದ ಜಮಾಲ್ ಗೋಳಿಕಟ್ಟೆ, ಮುಹಮ್ಮದ್ ಶಾಫಿ ತೋಡಾರ್, ನಂಡೆ ಪೆಙಳ್ ಅಭಿಯಾನದ ಅಧ್ಯಕ್ಷ ನೌಷಾದ್ ಹಾಜಿ ಸುರಲ್ಪಾಡಿ, ಸಂಸ್ಥೆಯ ಗೌರವ ಸಲಹೆಗಾರ ಹಾಜಿ ಎಸ್‌ಎಂ ರಶೀದ್, ಉಪಾಧ್ಯಕ್ಷ ಬಿ.ಮುಮ್ತಾಝ್ ಅಲಿ, ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಅಝಾದ್, ಕಾರ್ಯದರ್ಶಿ ಎಸ್‌ಎಮ್ ಮುಸ್ತಫ ಭಾರತ್, ಕೋಶಾಧಿಕಾರಿ ಅಬ್ದುಲ್ ರವೂಫ್ ಪುತ್ತಿಗೆ, ಪರಿಶೀಲನಾ ತಂಡದ ಮುಖ್ಯಸ್ಥ ಸುಲೈಮಾನ್ ಶೇಕ್ ಬೆಳುವಾಯಿ, ಸಂಘಟಕರಾದ ಯು.ಬಿ. ಮುಹಮ್ಮದ್, ರಿಯಾಝ್ ಕಣ್ಣೂರ್, ಡಿ ಅಬ್ದುಲ್ ಹಮೀದ್ ಕಣ್ಣೂರ್, ನಕಾಶ್ ಬಾಂಬಿಲ, ಅಬ್ದುಲ್ ಜಸೀಮ್ ಸಜಿಪ, ಮಜೀದ್ ತುಂಬೆ ಹಾಗೂ ಹುಸೈನ್ ಬಡಿಲ ಉಪಸ್ಥಿತರಿದ್ದರು.

ದ.ಕ.ಜಿಲ್ಲೆಯನ್ನು ಕೇಂದ್ರೀಕರಿಸಿ ವಿವಿಧ ಮೊಹಲ್ಲಾಗಳಲ್ಲಿ ಆರ್ಥಿಕ ಹಾಗೂ ಇನ್ನಿತರ ಕಾರಣಗಳಿಂದ ನೂರಾರು ಸಹೋದರಿಯರು ಮದುವೆಯಾಗದೆ ದಾಂಪತ್ಯ ಜೀವನದ ನಿರೀಕ್ಷೆಯಲ್ಲಿದ್ದು, ಅಂತಹ 233 ಸಹೋದರಿಯರಿಗೆ ದಾಂಪತ್ಯ ಜೀವನವನ್ನು ಕಲ್ಪಿಸಲು ನಂಡೆ ಪೆಂಙಳ್ ಅಭಿಯಾನದ ಮೂಲಕ ಸಾಧ್ಯವಾಗಿದೆ ಎಂದು ಟಿಆರ್‌ಎಫ್ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News